ಫೆಬ್ರವರಿಯಲ್ಲಿ ಈ ಬಾರಿ 29 ದಿನ ಬಂದಿರೋದು ಯಾಕೆ..?

ಹಾಯ್ ಫ್ರೆಂಡ್ಸ್, ಒಂದು ವರ್ಷದಲ್ಲಿ 365 ದಿನಗಳಿದೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಆದರೆ ಈ ವರ್ಷ 365 ದಿನಗಳ ಬದಲಾಗಿ 366 ದಿನ ಬಂದಿದೆ. ಫೆಬ್ರವರಿ 28 ಇದ್ದಿದ್ದು 29 ಆಗಿದೆ. ಅದ್ಹೇಗಪ್ಪ ಒಂದು ದಿನ ಹೆಚ್ಚಾಯ್ತು ಅಂತ ತಲೆಗೆ ಹುಳ ಹೋಗಿರಬಹುದು. ಸೋ ಅದನ್ನ ನಾವಿವತ್ತು ಕ್ಲಿಯರ್ ಮಾಡ್ತೀವಿ. ಜೊತೆಗೆ ಜನವರಿಯಲ್ಲಿ 31 ದಿನ, ಫೆಬ್ರವರಿಯಲ್ಲಿ 28 ಅಥವಾ 29 ದಿನ, ಮಾರ್ಚ್​​​​ನಲ್ಲಿ ಮತ್ತೆ 31 ದಿನ, ಏಪ್ರಿಲ್​​​​​ನಲ್ಲಿ 30 ದಿನ.. ಹೀಗೆ ಒಂದು ತಿಂಗಳಲ್ಲಿ 30 ಅಥವಾ 31 ದಿನವೇ ಯಾಕಿರುತ್ತೆ.. 50 ದಿನದ್ದು ಐದಾರು ತಿಂಗಳು ಅಥವಾ 100 ದಿನದ ಮೂರ್ನಾಲ್ಕು ತಿಂಗಳು ಇರಬಹುದಿತ್ತಲ್ಲ ಅಂತಾನೂ ಅನಿಸಿರಬಹುದು. ಅದಕ್ಕೂ ಇವತ್ತು ಉತ್ತರ ಕೊಡ್ತೀವಿ ನೋಡಿ..

ಫ್ರೆಂಡ್ಸ್,  ಈ ವರ್ಷದ ಕ್ಯಾಲೆಂಡರ್ ಗೆ ಸಾಮಾನ್ಯ ವರ್ಷಕ್ಕಿಂತ ಒಂದು ದಿನ ಹೆಚ್ಚು ಆಡ್ ಆಗಿದೆ. ಈ ಹೆಚ್ಚುವರಿ ದಿನವನ್ನು ಅಧಿಕ ದಿನ ಅಥವಾ ಲೀಪ್ ಡೇ ಅಂಥ ಕರೀತಾರೆ. ಅದೇ ರೀತಿ ಈ ವರ್ಷವನ್ನು ಲೀಪ್ ಇಯರ್ ಅಥವಾ ಅಧಿಕ ವರ್ಷ ಅಂತ ಕರೀತಾರೆ. ಇದು ನಾಲ್ಕು ವರ್ಷಕ್ಕೆ ಒಂದು ಸಲ ಬರುತ್ತೆ. ಅದೇಗೆ ಅಂದ್ರೆ.. ಫ್ರೆಂಡ್ಸ್ ನಮ್ಮ ಭೂಮಿ ಸೂರ್ಯನಿಗೆ ಒಂದು ಸುತ್ತು ಹಾಕಲು 365 ದಿನ ಬೇಕು. ಇದನ್ನೇ ನಾವು ಒಂದು ವರ್ಷ ಅಂತ ಹೇಳೋದು. ಎಕ್ಸಾಕ್ಟ್ ಆಗಿ ಹೇಳಬೇಕು ಅಂದ್ರೆ 365 ದಿನ 5 ಗಂಟೆ 48 ನಿಮಿಷ 45 ಸೆಕೆಂಡ್ ಬೇಕು. ಈ ಹೆಚ್ಚುವರಿ 5 ಗಂಟೆ 48 ನಿಮಿಷ 46 ಸೆಕೆಂಡ್ ಇದೆಯಲ್ವಾ ಇದನ್ನ ಕ್ಯಾಲೆಂಡರ್ ನಲ್ಲಿ ಎಲ್ಲೂ ತೋರಿಸೋಲ್ಲ. ಆದ್ರೆ ಇದೆ ಹೆಚ್ಚುವರಿ ಅವಧಿ 4 ವರ್ಷಕ್ಕೆ 1 ದಿನ ಆಗುತ್ತೆ. ಆಗ ಅದನ್ನ ಕ್ಯಾಲೆಂಡರ್ ನಲ್ಲಿ ತೋರಿಸಲೇಬೇಕು. ಆಗ ವರ್ಷದಲ್ಲಿ ಒಂದು ದಿನ ಹೆಚ್ಚಾಗಿ 366 ದಿನವಾಗುತ್ತೆ.

ಅಧಿಕ ದಿನ ಹೇಗೆ ಬರುತ್ತೆ ಅಂತ ನೋಡಿದ್ವಿ. ಆದ್ರೆ ಫೆಬ್ರವರಿಯಲ್ಲೇ ಇದ್ಯಾಕೆ ಬರುತ್ತೆ ಅನ್ನೋದಕ್ಕೆ ಉತ್ತರ ಇಲ್ಲಿದೆ ನೋಡಿ. ಜಗತ್ತಿನ ಎಲ್ಲಾ ದೇಶಗಳೂ ಸದ್ಯ ಗ್ರೆಗೋರಿಯನ್ ಕ್ಯಾಲೆಂಡರ್ ಫಾಲೋ ಮಾಡ್ತಿವೆ. ಈ ಕ್ಯಾಲೆಂಡರ್ ಪ್ರಕಾರ ಜನವರಿಯಲ್ಲಿ 31 ದಿನ, ಫೆಬ್ರವರಿಯಲ್ಲಿ 28 ಅಥವಾ ಅಧಿಕ ವರ್ಷ ಇದ್ದರೆ 29 ದಿನ, ಮಾರ್ಚ್ನಲ್ಲಿ 31 ದಿನ.. ಹೀಗೆ ಮುಂದುವರಿಯುತ್ತಾ ಹೋಗುತ್ತೆ. ಇನ್ನು ಗ್ರೆಗೋರಿಯನ್ ಕ್ಯಾಲೆಂಡರನ್ನ 1582 ರಲ್ಲಿ ಎಂಟನೇ ಪೋಪ್ ಗ್ರೆಗೋರಿಯನ್ ತಯಾರಿಸಿದ. ಒಂದು ವೇಳೆ ಯಾವುದಾದರೂ ದೇಶ ಲೀಪ್ ಇಯರ್ ಅಥವಾ ಅಧಿಕವರ್ಷ ಇಲ್ಲದ ಕ್ಯಾಲೆಂಡರನ್ನು ಫಾಲೋ ಮಾಡಿದ್ರೆ ಎಲ್ಲವೂ ಉಲ್ಟಾ ಪಲ್ಟಾ ಆಗ್ತಿತ್ತು. ಫಾರ್ ಎಕ್ಸಾಂಪಲ್.. ಚೀನಾ ದೇಶ ಬೇರೆ ಕ್ಯಾಲೆಂಡರ್ ಅನುಸರಿಸಿದ್ರೆ ಅಧಿಕ ವರ್ಷದಲ್ಲಿ ಫೆಬ್ರವರಿ 28 ರ ಬಳಿಕ ಮಾರ್ಚ್ ಒಂದು ಬರುತ್ತಿತ್ತು. ಉಳಿದ ದೇಶಗಳಲ್ಲಿ ಫೆಬ್ರವರಿ 29 ಆಗಿರುತ್ತಿತ್ತು. ಹೀಗಾದಾಗ ಯಾವುದೇ ಹಬ್ಬ, ಜಾಗತಿಕ ಸಮಾವೇಶ ಏನಾದ್ರೂ ಮಾಡ್ಬೇಕು ಅಂದ್ರೆ ಡೇಟ್ ಕ್ಲಾಶ್ ಆಗ್ತಿತ್ತು. ಚೀನಾದವರು ಒಂದು ದಿನ ಮುಂದಿರುತ್ತಿದ್ದರು. ನಾಲ್ಕು ವರ್ಷದ ನಂತ್ರ ಎರಡು ದಿನ, 8 ವರ್ಷಗಳ ನಂತ್ರ 3 ದಿನ ಮುಂದೆ ಇರುತ್ತಿದ್ದರು. ಇದರಿಂದ ಸಾಕಷ್ಟು ಸಮಸ್ಯೆ ಕೂಡ ಎದುರಾಗುತ್ತಿತ್ತು. ಗ್ರೆಗೋರಿಯನ್ ಕ್ಯಾಲೆಂಡರ್ ಜಾರಿಗೆ ಬಂದಾಗ್ಲೂ ಕೂಡಾ ಇದೆ ಆಗಿದ್ದು. ಆಗ ಕೆಲ ದೇಶಗಳು ಗ್ರೆಗೋರಿಯನ್ ಕ್ಯಾಲೆಂಡರ್ ಅನುಸರಿಸಿದರೆ. ಇನ್ನು ಕೆಲ ದೇಶಗಳು ಬೇರೆ ಕ್ಯಾಲೆಂಡರ್ ಫಾಲೋ ಮಾಡಿದ್ವು. ಕೊನೆಗೆ ತಪ್ಪಿನ ಅರಿವಾಗಿ ಗ್ರೆಗೋರಿಯನ್ ಕ್ಯಾಲೆಂಡರ್ ಅನ್ನೇ ಅಳವಡಿಸಿಕೊಂಡವು.

ಫ್ರೆಂಡ್ಸ್, ಇದಾಗಿತ್ತು ಲೀಪ್ ಇಯರ್ ಅಥವಾ ಅಧಿಕ ವರ್ಷ ದ ಬಗ್ಗೆ ತಿಳಿಸಿಕೊಡುವ ಪ್ರಯತ್ನ. ಈ ವರ್ಷ ದ ಅಧಿಕ ದಿನವಾದ ಫೆಬ್ರವರಿ 29 ಅನ್ನು ಚೆನ್ನಾಗಿ ಬಳಸಿಕೊಳ್ಳಿ. ಯಾಕಂದ್ರೆ ಈ ಎಕ್ಟ್ರಾ ದಿನ ನೆಕ್ಸ್ಟ್ ಇದು ಬರುವುದು 2024 ರಲ್ಲಿ.

Contact Us for Advertisement

Leave a Reply