ರಾಜ್ಯದ ಜನತೆಗೆ ಕರೆಂಟ್‌ ಶಾಕ್…!‌

masthmagaa.com:

ಒಂದು ಕಡೆ ಕರ್ನಾಟಕದಲ್ಲಿ ದಶಕಗಳಲ್ಲೆ ಕಂಡಿರದ ಬರಗಾಲ ಎದುರಾಗಿದ್ರೆ, ಮತ್ತೊಂದು ಕಡೆ ಉಚಿತ ವಿದ್ಯುತ್ ಯೋಜನೆಯಿಂದ ಹೆಚ್ಚಾಗಿರುವ‌ ಬೇಡಿಕೆ ಪೂರೈಸಲು ಸ್ವತಃ ಸರ್ಕಾರವೇ ಹೆಣಗಾಡ್ತಿದೆ. ದಿನನಿತ್ಯ ಅಗತ್ಯಕ್ಕಿಂತ ಸುಮಾರು 40 ರಿಂದ 50 ಮಿಲಿಯನ್‌ ಯೂನಿಟ್‌ಗಳಷ್ಟು ಕೊರತೆ ಇದೆ. ಸಚಿವರು ಬಾಯ್ತುಂಬಾ ʻಕೊರತೆ ಇಲ್ಲಾ, ಲೋಡ್‌ಶೆಡ್ಡಿಂಗ್‌ ಮಾಡ್ತಿಲ್ಲಾʼ ಅಂತಿದ್ರೂ, ಅಂಕಿ-ಅಂಶಗಳು ಬೇರೇನೆ ಕತೆ ಹೇಳ್ತಿವೆ.

ರಾಜ್ಯದಲ್ಲಿ ಈ ಬಾರಿ ಆಲಮಟ್ಟಿ ಡ್ಯಾಂ ಬಿಟ್ರೆ ಯಾವೊಂದು ಜಲಾಶಯಗಳು ಸಹ ತುಂಬಿಲ್ಲ. ಹಾಗಾಗಿ ಜಲ ವಿದ್ಯುತ್‌ ಉತ್ಪಾದನೆ ಕಡಿಮೆಯಾಗಿ ಅಭಾವ ಉಂಟಾಗಿದ್ದು, ರೈತರ ಪಂಪ್‌ಸೆಟ್‌ಗಳಿಗೆ ಕರೆಂಟ್‌ ಇಲ್ಲದಂತಾಗಿದೆ, 7 ಗಂಟೆಗಳ ಜಾಗದಲ್ಲಿ ಈಗ 2 ಗಂಟೆ ಅಷ್ಟೇ ತ್ರಿಪೇಸ್‌ ಕರೆಂಟ್‌ ನೀಡಲಾಗ್ತಿದೆ. ಗೃಹ ಜ್ಯೋತಿಯ ಫಲವಾಗಿ ಈಗಾಗಲೇ ರಾಜ್ಯದಲ್ಲಿ ಕಳೆದ ವರ್ಷಕ್ಕಿಂತ 30% ರಷ್ಟು ಹೆಚ್ಚಾಗಿದೆ. ಬೇಡಿಕೆ ಪೂರೈಸಲು ಇಂಧನ ಇಲಾಖೆಯು ಉತ್ತರ ಪ್ರದೇಶ, ಪಂಜಾಬ್‌ನಿಂದ ವಿನಿಮಯ ಯೋಜನೆಯಡಿ ವಿದ್ಯುತ್‌ ಪಡೆಯೋಕೆ ಮುಂದಾಗಿದೆ ಅಂತಾನೂ ತಿಳಿದುಬಂದಿದೆ, 2024ರ ಮುಂಗಾರು ಶುರುವಾಗೋವರೆಗೂ ಇದೇ ಪರಿಸ್ಥಿತಿ ಮುಂದುವರೆಯೋ ಸಾಧ್ಯತೆ ಇರೋದ್ರಿಂದ ರಾಜ್ಯ ಸರ್ಕಾರ ಇದನ್ನ ಹೇಗೆ ನಿಭಾಯಿಸುತ್ತೆ ಅಂತ ಕಾದುನೋಡಬೇಕಿದೆ.

-masthmagaa.com

Contact Us for Advertisement

Leave a Reply