ಕೊರೋನಾ ಬಂದು ಹೋಗಿ 6 ತಿಂಗಳಾದ್ರೂ ಮಹಿಳೆ ನರಕಯಾತನೆ..!

masthmagaa.com:

ಇಂಗ್ಲೆಂಡ್: ದೇಶದಲ್ಲಿ ಕೊರೋನೋ ಸೋಂಕಿತರ ಸಂಖ್ಯೆ ಜಾಸ್ತಿಯಾಗ್ತಿದ್ರೂ ಜನರಲ್ಲಿ ಭಯ ಮಾತ್ರ ಕಡಿಮೆಯಾಗ್ತಾ ಇದೆ.. ಅದೆಷ್ಟೋ ಜನ ಮಾಸ್ಕ್​ ಕೂಡ ಹಾಕದೇ ಓಡಾಡ್ತಿದ್ದಾರೆ. ಈ ಕಾಯಿಲೆ ಮೇಲ್ನೋಟಕ್ಕೆ ನೋಡುವಷ್ಟು ಸುಲಭ ಇಲ್ಲ. ಕೆಲವರಿಗೆ ಈ ಮಹಾಮಾರಿ ಲಕ್ಷಣವೇ ತೋರಿಸದೇ ವಕ್ಕರಿಸಿಕೊಂಡ್ರೆ, ಇನ್ನು ಕೆಲವರಿಗೆ ದೀರ್ಘಕಾಲದವರೆಗೆ ಈ ಕಾಯಿಲೆ ಕಾಡಬಹುದು.. ಪರಿಣಾಮ ಬೀರಬಹುದು ಅನ್ನೋದಕ್ಕೆ ಸಾಕ್ಷಿ ಈ ಸ್ಟೋರಿ.. ಇಂಗ್ಲೆಂಡ್​​ನಲ್ಲಿ ಜೆಸ್ ಮಾರ್ಚ್​​ಬೆಂಕ್ ಎಂಬ ನರ್ಸ್​ ಒಬ್ಬರಿಗೆ ಮಾರ್ಚ್​ ತಿಂಗಳಲ್ಲಿ ಕೊರೋನಾ ಬಂದಿತ್ತು.. 3 ದಿನ ಚಿಕಿತ್ಸೆ ನೀಡಿ, ನೆಗೆಟಿವ್ ರಿಪೋರ್ಟ್​ ಬಂದ ಬಳಿಕ ಅವರನ್ನು ಡಿಸ್ಚಾರ್ಜ್ ಮಾಡಲಾಗಿತ್ತು.. ಆದ್ರೆ ಡಿಸ್ಚಾರ್ಜ್ ಆಗಿ 6 ತಿಂಗಳು ಕಳೆದರೂ ಜೆಸ್ ಇನ್ನೂ ಅದರ ಪರಿಣಾಮಗಳಿಂದ ನರಳುತ್ತಿದ್ಧಾರೆ. ನಡೆಯಲು ಆಗಲ್ಲ. ಕೆಲಸ ಮಾಡಲು ಆಗ್ತಿಲ್ಲ. ಒಮ್ಮೊಮ್ಮೆ ಉಸಿರಾಟದ ಸಮಸ್ಯೆ ಕೂಡ ಉಂಟಾಗ್ತಿದೆ. ಅಂದ್ರೆ ಕೊರೋನಾ ಇಷ್ಟರಮಟ್ಟಿಗೆ ಪರಿಣಾಮ ಬೀರಿದೆ ಅಂತ ಅರ್ಥ..

-masthmagaa.com

Contact Us for Advertisement

Leave a Reply