ಆಸ್ಕರ್‌ ಗೆಲ್ಲೋಕೆ ಕೋಟಿ ಕೋಟಿ ಖರ್ಚಾಗಿಲ್ಲ : RRR ನಿರ್ಮಾಪಕ

masthmagaa.com:

S.S ರಾಜಮೌಳಿ ನಿರ್ದೇಶನದ ಈ ಚಿತ್ರವು ಇತ್ತೀಚೆಗೆ ಮಾರ್ಚ್ 12 ರಂದು ಲಾಸ್ ಏಂಜಲೀಸ್‌ನಲ್ಲಿ ನಡೆದ 95 ನೇ ಅಕಾಡೆಮಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ನಾಟು ನಾಟುಗಾಗಿ ಬೆಸ್ಟ್‌ ಒರಿಜಿನಲ್‌ ಸಾಂಗ್‌ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಈ ಹಿಂದೆ ‘RRR’ ನಿರ್ದೇಶಕ ರಾಜಮೌಳಿ ಆಸ್ಕರ್‌ಗಾಗಿ ಪ್ರಚಾರ ಮಾಡಲು ಕೋಟಿಗಟ್ಟಲೆ ಖರ್ಚು ಮಾಡಿದ್ದಾರೆ ಎಂದು ಹಿರಿಯ ತೆಲುಗು ಚಲನಚಿತ್ರ ನಿರ್ಮಾಪಕ ತಮ್ಮರೆಡ್ಡಿ ಭಾರದ್ವಾಜ ಹೇಳಿಕೊಂಡಿದ್ದರು. ಕೋಟಿಗಟ್ಟಲೇ ಹಣ ಸುರಿದು ‘RRR’ ಸಿನಿಮಾವನ್ನ ಅಮೇರಿಕಾದಲ್ಲಿ ಕ್ಯಾಂಪೇನ್‌ ಮಾಡಲಾಗಿತ್ತು. ಮತ್ತುಬೇರೆ ಬೇರೆ ಕಡೆಗಳಲ್ಲಿ ಚಿತ್ರದ ಪ್ರದರ್ಶನ ಆಯೋಜಿಸಿ ಆಸ್ಕರ್‌ ಜ್ಯೂರಿ ಮೆಂಬರ್ಸ್‌ ಗಳನ್ನ ಸೆಳೆಯುವ ಪ್ರಯತ್ನ ಆಗಿತ್ತು. ಇದಕ್ಕೆಲ್ಲಾ ಸಾಕಷ್ಟು ಹಣ ಖರ್ಚಾಗಿದ್ದು, ನಿರ್ದೇಶಕ S.S ರಾಜಮೌಳಿ ಅವರು ತಮ್ಮ ಸ್ವಂತ ದುಡ್ಡಿನಿಂದ ಮಾಡಿದ್ರು ಅನ್ನೊ ಸುದ್ದಿ ಎಲ್ಲಡೇ ಹರಡಿತ್ತು.

ಆದರೆ ಈಗ RRR ನಿರ್ಮಾಪಕ ಡಿವಿವಿ ದಾನಯ್ಯ ಅವರು ಚಿತ್ರದ ಆಸ್ಕರ್ ಪ್ರಚಾರಕ್ಕಾಗಿ ಖರ್ಚು ಮಾಡಿದ ವರದಿಗಳ ಬಗ್ಗೆ ಪ್ರತಿಕ್ರಿಯಿಸಿ, “ಆಸ್ಕರ್ ಪ್ರಚಾರಕ್ಕಾಗಿ ಖರ್ಚು ಮಾಡಿದ ಹಣದ ಬಗ್ಗೆಯೂ ನಾನು ಕೇಳಿದೆ. ನಾನು ಪ್ರಚಾರಕ್ಕಾಗಿ ಯಾವುದೇ ಹಣವನ್ನು ಖರ್ಚು ಮಾಡಿಲ್ಲ ಮತ್ತು ನಿಖರವಾಗಿ ಏನಾಯಿತು ಎಂದು ನನಗೆ ತಿಳಿದಿಲ್ಲ. ಆದರೆ ಪ್ರಶಸ್ತಿ ಸಮಾರಂಭಕ್ಕೆ ಯಾರೂ 80 ಕೋಟಿ ಖರ್ಚು ಮಾಡುವುದಿಲ್ಲ. ಇದರಲ್ಲಿ ಯಾವುದೇ ಲಾಭ ಇರುವುದಿಲ್ಲ” ಎಂದು ಸಂದರ್ಶನವೊಂದರಲ್ಲಿ ದಾನಯ್ಯ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply