1ನೇ ತರಗತಿ ಮಕ್ಕಳಿಗೂ ಶಾಲೆ! ಯಾವಾಗ ಶುರುವಾಗುತ್ತೆ..?

masthmagaa.com:

ಕೊರೋನಾ ಪ್ರಕರಣಗಳು ಕಮ್ಮಿಯಾದ ನಡುವೆ ಮಧ್ಯಪ್ರದೇಶ ಮತ್ತು ಹರಿಯಾಣದಲ್ಲಿ ಇವತ್ತಿನಿಂದ 1ನೇ ತರಗತಿ ಮಕ್ಕಳಿಗೂ ಭೌತಿಕ ಶಾಲೆಗಳು ಆರಂಭವಾಗಿವೆ. ಮಧ್ಯಪ್ರದೇಶದಲ್ಲಿ 1ರಿಂದ 5ನೇ ತರಗತಿಗಳು ಓಪನ್ ಆದ್ರೆ, ಹರಿಯಾಣದಲ್ಲಿ 1ರಿಂದ 3ನೇ ತರಗತಿಗಳು ಓಪನ್ ಆಗಿವೆ. 50 ಪರ್ಸೆಂಟ್​ ಕೆಪಾಸಿಟಿಗೆ ಮಾತ್ರ ಅವಕಾಶ ನೀಡಲಾಗಿದೆ. ಇನ್ನು ಮಧ್ಯಪ್ರದೇಶದಲ್ಲೇ 8, 10 ಮತ್ತು 12ನೇ ತರಗತಿಗಳು ಹಂಡ್ರೆಡ್​ ಪರ್ಸೆಂಟ್​​ ಓಪನ್ ಆಗಿವೆ. ಜೊತೆಗೆ ವಸತಿ ಶಾಲೆಗಳು ಕೂಡ ಇವತ್ತಿಂದ ಆರಂಭವಾಗಿವೆ. ಮತ್ತೊಂದುಕಡೆ ಶಾಲೆ ಆರಂಭದ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಮಧ್ಯಪ್ರವೇಶಿಸಲ್ಲ ಅಂತ ಸುಪ್ರೀಂಕೋರ್ಟ್​ ಹೇಳಿದೆ.

-masthmagaa.com

Contact Us for Advertisement

Leave a Reply