ಅಸ್ತಿತ್ವಕ್ಕೆ ಅಪಾಯ ಬಂದ್ರೆ ಪರಮಾಣು ಬಾಂಬ್: ರಷ್ಯಾ

masthmagaa.com:

ಚಿಕ್ಕಮಕ್ಕಳಿಗೆ ಗುಮ್ಮ ಬರುತ್ತೆ ನೋಡು ಅಂತ ಹೆದರಿಸೋ ರೀತಿ ರಷ್ಯಾ ಆವಾಗಾವಾಗ ನ್ಯೂಕ್ಲಿಯರ್‌ ಬಾಂಬ್‌ ಪ್ರಸ್ತಾಪವನ್ನ ಮಾಡ್ತಾನೆ ಇದೆ. ಇದೀಗ ಮತ್ತೆ ಪರಮಾಣು ಶಸ್ತ್ರಾಸ್ತ್ರದ ಬಗ್ಗೆ ಮಾತಾಡಿರೋ ಅದು, ನಮ್ಮ ದೇಶದ ಅಸ್ತಿತ್ವಕ್ಕೆ ಅಪಾಯ ಬಂದಾಗ ನಾವು ನ್ಯೂಕ್ಲಿಯರ್‌ ವೆಪನ್‌ ಬಳಸ್ತೇವೆ ಅಂತ ಹೇಳಿದೆ. ಕ್ರೆಮ್ಲಿನ್‌ನ ವಕ್ತಾರ ಡಿಮಿಟ್ರಿ ಪೆಸ್ಕೋವ್‌ ಸಿಎನ್‌ಎನ್‌ಗೆ ಸಂದರ್ಶನ ಕೊಟ್ಟಾಗ ಈ ರೀತಿ ಮಾತಾಡಿದ್ದು, ನಾವು ಡೊಮೆಸ್ಟಿಕ್‌ ಸೆಕ್ಯುರಿಟಿ ಮತ್ತು ನಮ್ಮ ಜನರ ರಕ್ಷಣೆಯ ಕಾನ್ಸೆಪ್ಟ್‌ ಹೊಂದಿದ್ದೇವೆ. ಅದ್ರಲ್ಲಿ ಯಾವ್ಯಾವ ಕಾರಣಗಳಿಗೆ ನ್ಯೂಕ್ಲಿಯರ್‌ ಆರ್ಮ್ಸ್‌ ಬಳಸಬಹುದು ಅಂತ ಇದೆ, ನೀವ್‌ ಬೇಕಾದ್ರೆ ಅದನ್ನ ಓದ್ಬಹುದು. ಯುಕ್ರೇನ್‌ ವಿಚಾರದಲ್ಲೂ ನಾವು ಆ ಕಾನ್ಸೆಪ್ಟ್‌ ಪ್ರಕಾರನೇ ಪರಮಾಣು ಶಸ್ತ್ರ ಬಳಸೊದು ಅಂತ ಹೇಳಿದ್ದಾರೆ. ಇನ್ನು ಇದ್ರ ಬಗ್ಗೆ ಪ್ರತಿಕ್ರಿಯಿಸಿರೋ ಪೆಂಟಗಾನ್‌ನ ವಕ್ತಾರ ಜಾನ್‌ ಕಿರ್ಬಿ, ಮಾಸ್ಕೋ ನ್ಯೂಕ್ಲಿಯರ್‌ ವೆಪನ್‌ ಬಗ್ಗೆ ಮಾತಾಡ್ತಾ ಇರೋದು ಡೇಂಜರಸ್‌, ಒಂದು ಜವಾಬ್ದಾರಿಯುತ ಪರಮಾಣು ರಾಷ್ಟ್ರ ನಡ್ಕೊಳ್ಳೋ ರೀತಿ ಅಲ್ಲ ಇದು ಅಂತ ಹೇಳಿದ್ದಾರೆ. ಜೊತೆಗೆ ಈ ವಿಚಾರದಲ್ಲಿ ಅಂತಹ ಮಹತ್ವದ ಬೆಳವಣಿಗೆ ಏನು ಕಂಡುಬಂದಿಲ್ಲ, ನಾವು ಪ್ರತಿದಿನ ಮಾನಿಟರ್‌ ಮಾಡ್ತಾ ಇದೇವೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply