ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಈ ಕಾರಲ್ಲೇ ಓಡಾಡೋದು ಯಾಕೆ..?

ಹಾಯ್ ಫ್ರೆಂಡ್ಸ್, ಇದು ವಿಶ್ವದ ಅತಿ ದೊಡ್ಡ ದೇಶ ಹಾಗೂ ಪವರ್ಫುಲ್ ರಾಷ್ಟ್ರಗಳಲ್ಲಿ ಒಂದಾದ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಓಡಾಡುವ ಕಾರು. ಅಮೇರಿಕಾ ಅಧ್ಯಕ್ಷರಂತೆ ಜಿನ್ಪಿಂಗ್ ಕೂಡ ವಿಶ್ವದ ಯಾವ ಮೂಲೆಗೆ ಹೋದರು ಈ ವಿಶೇಷ ಕಾರಿನಲ್ಲಿ ಪ್ರಯಾಣ ಬೆಳೆಸುತ್ತಾರೆ. ಹಾಗಾದ್ರೆ ಈ ಕಾರಿನ ಸ್ಪೆಷಲಿಟಿ ಏನು..? ಇದರ ಬೆಲೆ ಎಷ್ಟು..? ಬೇರೆಲ್ಲಾ ಕಾರುಗಳನ್ನ ಹೊರತುಪಡಿಸಿ ಜಿನ್ಪಿಂಗ್ ಇದೇ ಕಾರನ್ನ ಆಯ್ಕೆ ಮಾಡಲು ಕಾರಣವೇನು..? ಈ ಇಂಟರೆಸ್ಟಿಂಗ್ ವಿಚಾರವನ್ನ ಹೇಳ್ತಾ ಹೋಗ್ತಿವಿ ನೋಡಿ..

ಈ ಕಾರಿನ ಹೆಸರೇನು..?
ಫ್ರೆಂಡ್ಸ್ ಚೀನಾ ಅಧ್ಯಕ್ಷ ಜಿನ್ಪಿಂಗ್ ಓಡಾಡುವ ಈ ಕಾರಿನ ಹೆಸರು ಹಾಂಗ್‍ಕಿ ಎಲ್5.. ಹಾಂಗ್‍ಕಿ ಅಂದ್ರೆ ಚೀನಿ ಭಾಷೆಯಲ್ಲಿ ಕೆಂಪು ಬಾವುಟ ಎಂದರ್ಥ. ಇದು ಕಮ್ಯುನಿಸಂನ ಸಂಕೇತ. ಎಲ್ 5 ಅನ್ನೋದು ಒಂದು ಸೀರೀಸ್. ಇದು ಚೀನಾದ ಅತ್ಯಂತ ದುಬಾರಿ ಕಾರು. ಇದನ್ನ ಪರ್ಚೇಸ್ ಮಾಡಬೇಕು ಅಂದ್ರೆ ನೀವು ಚೀನಾಗೆ ಹೋಗಬೇಕು. ಯಾಕೆ ಅಂತ ಮುಂದಕ್ಕೆ ಹೇಳ್ತೀವಿ ನೋಡಿ.

ಹಾಂಗ್‍ಕಿ ಎಲ್5 ವಿಶೇಷತೆ ಏನು..?
ಫ್ರೆಂಡ್ಸ್ ಹಾಂಗ್‍ಕಿ ಎಲ್5 ಕಾರಿನಲ್ಲಿ 4000 ಸಿಸಿ ಎಂಜಿನ್ ಇದೆ. ಸುರಕ್ಷತೆಯ ದೃಷ್ಟಿಯಿಂದ ನೋಡುವುದಾದರೆ ಇದು ವಿಶ್ವದ ಅತ್ಯಂತ ಸೇಫ್ ಕಾರ್. ಈ ಕಾರು ಸುಮಾರು 18 ಅಡಿಗೂ ಹೆಚ್ಚು ಉದ್ದವಿದೆ. ಹಾಗೂ 6.6 ಅಡಿಗೂ ಹುಚ್ಚು ಅಗಲವಿದೆ. ಸುಮಾರು ಐದು ಅಡಿಯಷ್ಟು ಎತ್ತರವಿದೆ. ಈ ದೈತ್ಯ ಕಾರು 3150 ಕೆಜಿಗೂ ಹೆಚ್ಚು ತೂಕವಿದೆ. 105 ಲೀಟರ್ ಸಾಮಥ್ರ್ಯದ ಫ್ಯೂಯಲ್ ಟ್ಯಾಂಕ್ ಇದೆ. ಈ ಕಾರು 6 ಗೇರಿನ ಆಟೋಮೆಟಿಕ್ ಸಿಸ್ಟಮ್ ಅನ್ನ ಒಳಗೊಂಡಿದೆ. ಇನ್ನು ಕಾರಿನ ಇಂಟೀರಿಯರ್ ಅಂತೂ ಸೂಪರ್. ಅದನ್ನ ರೋಸ್ ವುಡ್ ಹಾಗೂ ಕ್ರೀಮ್ ವೈಟ್ ಲೆದರ್ ನಿಂದ ಮಾಡಲಾಗಿದೆ. ಇದರ ಡ್ಯಾಶ್ಬೋರ್ಡ್ ಹಾಗೂ ಸೆಂಟ್ರಲ್ ಕಂಟ್ರೋಲ್ ಸಂಪೂರ್ಣವಾಗಿ ಡಿಜಿಟಲ್ ಆಗಿದೆ. ಇನ್ನು ಕಾರಿನ ಬಹುತೇಕ ಕಡೆಗಳಲ್ಲಿ ಗೋಲ್ಡ್ ಕಲರ್‍ನ ಸೂರ್ಯಕಾಂತಿಗಳು ಕಾಣಸಿಗುತ್ತವೆ. ಸೂರ್ಯಕಾಂತಿ ದೀರ್ಘಾಯುಷ್ಯ ಹಾಗೂ ಅದೃಷ್ಟದ ಸಂಕೇತ. ಹಿಂದೀನ ಸೀಟಿನಲ್ಲಿ ಟಿವಿ ಇದ್ದು, ಬೋಸ್ ಸೌಂಡ್ ಸಿಸ್ಟಮ್ ಒಳಗೊಂಡಿದೆ. ಕಾರಿನ ಮುಂಭಾಗದ ಸೆಂಟರ್ನಲ್ಲಿ ಕೆಂಪು ಧ್ವಜದ ಬ್ಯಾಡ್ಜ್ ಇದೆ. ಇದರ ಫ್ರೇಂ ಲೋಹದಿಂದ ಮಾಡಲ್ಪಟ್ಟಿದ್ದು, ಧ್ವಜವನ್ನ ಗಾಜಿನಿಂದ ಮಾಡಲಾಗಿದೆ. ಜೊತೆಗೆ ಇದರಲ್ಲಿ ಅತ್ಯಾಧುನಿಕ ಸಂಪರ್ಕ ಸಾಧನಗಳಿದ್ದು, ಚೀನಾ ಅಧ್ಯಕ್ಷರು ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದಾಗಲೇ ಜಗತ್ತಿನ ಯಾವುದೇ ಪ್ರಮುಖ ದೇಶದ ನಾಯಕರನ್ನು ಸಂಪರ್ಕಿಸಲು ವ್ಯವಸ್ಥೆ ಇದೆ. ಜೊತೆಗೆ ಈ ಕಾರಿನಲ್ಲಿ ಪಯಣ ಮಾಡುತ್ತಿರುವಾಗಲೇ ಹೆಚ್ಚಿನ ಅಧ್ಯಕ್ಷರು ತಮ್ಮ ಸೇನೆಗೆ ಆದೇಶಗಳನ್ನು ನೀಡಲು ವ್ಯವಸ್ಥೆ ಇದೆ. ಇಷ್ಟು ಮಾತ್ರವಲ್ಲ ಈ ಕಾರು ಸಂಪೂರ್ಣವಾಗಿ ಬುಲೆಟ್ ಪ್ರೂಫ್. ವಿಶ್ವದ ಯಾವುದೇ ಬಂದೂಕಿನಿಂದ ಸಿಡಿಯುವ ಗುಂಡು ಕೂಡ ಕಾರಿನ ವಜ್ರ ಕವಚವನ್ನು ಭೇದಿಸಿ ಒಳಗೆ ಹೋಗಲು ಸಾಧ್ಯವೇ ಇಲ್ಲ. ಜೊತೆಗೆ ಸಣ್ಣಪುಟ್ಟ ಸ್ಫೋಟಕಗಳನ್ನು ಬಳಸಿ ಈ ಕಾರನ್ನು ಸ್ಪೋಟಿಸಲೂ ಸಾಧ್ಯವಿಲ್ಲ. ಒಂದು ವೇಳೆ ಈ ಕಾರು ಸಾಗುತ್ತಿರುವಾಗ ನೆಲದಲ್ಲಿ ಸ್ಪೋಟಕ ಇಟ್ಟು ಸ್ಪೋಟಿಸಿ ಕಾರನ್ನ ಉಡಾಯಿಸಿದರೂ, ಒಳಗೆ ಇರುವ ಚೀನಾದ ಅಧ್ಯಕ್ಷರಿಗೆ ಏನೂ ಆಗದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೀಗಾಗಿ ಇದು ವಿಶ್ವದ ಅತ್ಯಂತ ಸೇಫ್ ಕಾರುಗಳಲ್ಲಿ ಒಂದು. ಅಮೇರಿಕಾ ಅಧ್ಯಕ್ಷರು ಬಳಸುವ ಕ್ಯಾಡಿಲಾಕ್ ಒನ್ ಅಥವಾ ದಿ ಬೀಸ್ಟ್ ಗೆ ಸರಿಸಮನಾಗಿ ಈ ಕಾರನ್ನು ಬಿಲ್ಡ್ ಮಾಡಲಾಗಿದೆ.

ಹಾಂಗ್‍ಕಿ ಎಲ್5 ಕಾರಿನ ಬೆಲೆ ಎಷ್ಟು..?
ಫ್ರೆಂಡ್ಸ್ ಹಾಂಗ್‍ಕಿ ಎಲ್5 ಸೆಡಾನ್ ಕಾರಿನ ಬೆಲೆ ಬರೋಬ್ಬರಿ ಎಂಟು ಲಕ್ಷ ಅಮೇರಿಕನ್ ಡಾಲರ್. ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳಬೇಕು ಅಂದ್ರೆ ಬರೋಬ್ಬರಿ 5.6 ಕೋಟಿ ರೂಪಾಯಿ. ಈ ಕಾರನ್ನು ಕೊಳ್ಳಬೇಕು ಅಂದ್ರೆ ನೀವು ಚೀನಾಗೆ ಹೋಗಬೇಕು. ಯಾಕಂದ್ರೆ ಹಾಂಗ್‍ಕಿ ಎಲ್5 ಕಾರನ್ನ ಚೀನಾ ಬಿಟ್ಟರೆ ಬೇರೆ ಯಾವ ದೇಶದಲ್ಲೂ ಮಾರಾಟ ಮಾಡುವುದಿಲ್ಲ. ಎಲ್5 ಸೀರೀಸ್ ನಲ್ಲಿ 3 ವೆರಿಯಂಟ್ ಗಳಿವೆ. ಒಂದು ಸರ್ಕಾರಕ್ಕೆ, ಮತ್ತೊಂದು ಪರೇಡ್ ಕಾರು, ಮಗದೊಂದು ಜನಸಾಮಾನ್ಯರ ಆವೃತ್ತಿ.

ಫ್ರೆಂಡ್ಸ್ ಇದಿಷ್ಟು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಓಡಾಡುವ ಪವರ್ಫುಲ್ ಕಾರು. ಜಿನ್ ಪಿಂಗ್ ಜಗತ್ತಿನ ಯಾವುದೇ ಮೂಲೆಗೆ ಹೋದರೂ ಅವರು ಪ್ರಯಾಣಿಸುವ ವಿಮಾನದಲ್ಲಿ ಕಾರು ಕೂಡ ಹೋಗುತ್ತೆ. ಏರ್ಪೋರ್ಟ್ ನಲ್ಲಿ ಇಳಿದ ತಕ್ಷಣ ಈ ಕಾರಿನಲ್ಲಿ ಜಿನ್ಪಿಂಗ್ ಪ್ರಯಾಣ ಬೆಳೆಸುತ್ತಾರೆ.

Contact Us for Advertisement

Leave a Reply