ಭಾರತಕ್ಕೆ ಬರ್ತಿದ್ದಾರೆ ಚೀನಾ ಅಧ್ಯಕ್ಷ.. ಮೋದಿ ಜೊತೆ 5 ಗಂಟೆ ಸಭೆ..!

ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಇವತ್ತು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 1.30ಕ್ಕೆ ಚೆನ್ನೈಗೆ ಆಗಮಿಸಲಿದ್ದು, ಪ್ರಧಾನಿ ಮೋದಿ ಮಹಾಬಲಿಪುರಂನಲ್ಲಿ ಕ್ಸಿ ಜಿನ್‍ಪಿಂಗ್ ಭೇಟಿಯಾಗಲಿದ್ದಾರೆ. ಚೆನ್ನೈನಿಂದ 56 ಕಿಲೋಮೀಟರ್ ದೂರದಲ್ಲಿರುವ ಈ ನಗರ ಈಗ ಖಾಕಿ ಭದ್ರಕೋಟೆಯಾಗಿ ಮಾರ್ಪಟ್ಟಿದೆ. 5 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದ್ದು, ಸಮುದ್ರದಲ್ಲಿ ಯುದ್ಧ ನೌಕೆ ಗಸ್ತು ತಿರುಗುತ್ತಿದೆ. ಇನ್ನು ಕ್ಸಿ ಜಿನ್‍ಪಿಂಗ್ ಸ್ವಾಗತಕ್ಕೆ ಚೆನ್ನೈ ಸಕಲ ರೀತಿಯಲ್ಲೂ ಸಜ್ಜಾಗಿದೆ.

ಪ್ರಧಾನಿ ಮೋದಿಯವರ ಜೊತೆ 2ನೇ ಅನೌಪಚಾರಿಕ ಮಾತುಕತೆಗಾಗಿ ಚೆನ್ನೈಗೆ ಆಗಮಿಸಲಿದ್ದಾರೆ. ಉಭಯನಾಯಕರು 5 ಗಂಟೆಗಳ ಕಾಲ 4 ಸಭೆಗಳನ್ನು ನಡೆಸಲಿದ್ದಾರೆ. ಇಬ್ಬರೂ ನಾಯಕರು ಸಮುದ್ರ ದಡದಲ್ಲಿರುವ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಕ್ಸಿ ಜಿನ್ ಪಿಂಗ್ ಸುಮಾರು 24 ಗಂಟೆಗಳ ಕಾಲ ಚೆನ್ನೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆಯಲಿದ್ದಾರೆ. ಮೋದಿ ಮತ್ತು ಕ್ಸಿ ಜಿನ್‍ಪಿಂಗ್ ಮಹಾಬಲಿಪುರಂನಲ್ಲಿರುವ 3 ಪ್ರಸಿದ್ಧ ಸ್ಮಾರಕಗಳಿಗೆ ಭೇಟಿ ನೀಡಲಿದ್ದು, ಸಾಂಸ್ಕøತಿಕ ಕಾರ್ಯಕ್ರಮಗಳಲ್ಲೂ ಭಾಗಿಯಾಗಲಿದ್ದಾರೆ. ಶನಿವಾರ ಮಧ್ಯಾಹ್ನದ ವೇಳೆ ಕ್ಸಿ ಜಿನ್‍ಪಿಂಗ್ ವಾಪಸ್ ತೆರಳುವ ಸಾಧ್ಯತೆ ಇದೆ.

Contact Us for Advertisement

Leave a Reply