ಸದ್ಯದಲ್ಲೇ ಅಂತ್ಯವಾಗುತ್ತಾ ರಷ್ಯಾ- ಯುಕ್ರೇನ್ ಯುದ್ಧ?

masthmagaa.com:

ಸುಮಾರು ಮೂರು ವಾರಗಳಿಂದ ನಡೀತಾ ಇರೋ ಭೀಕರ ಯುದ್ಧ ಕೊನೆಗೂ ಅಂತ್ಯ ಆಗ್ಬಹುದು ಅನ್ನೋ ಭರವಸೆಗಳು ಮೂಡ್ತಾ ಇವೆ. ಯುದ್ಧದ ಜೊತೆಜೊತೆಗೆನೆ ರಷ್ಯಾ ಮತ್ತು ಯುಕ್ರೇನ್‌ ಮಾತುಕತೆಗಳನ್ನ ನಡೆಸ್ತಾ ಇರೋದು ನಾವೆಲ್ಲ ನೋಡಿದಿವಿ. ಶುರುವಿನಲ್ಲಿ ಆ ಮಾತುಕತೆಗಳಿಂದ ಯಾವುದೇ ಪ್ರತಿಫಲ ಸಿಗದೇ ಇದ್ರು, ಮೂರು ಮತ್ತು ನಾಲ್ಕನೇ ಸುತ್ತಿನ ಮಾತುಕತೆಯ ಹೊತ್ತಿಗೆ ಉಭಯ ದೇಶಗಳು ಒಂದು ಹಂತದ ಒಪ್ಪಂದಗಳಿಗೆ ಸಿದ್ಧವಾಗ್ತಾ ಇವೆ. ಈಗ ಇದೇ ವಿಷಯವಾಗಿ ಮಾತಾಡಿರೋ ಯುಕ್ರೇನ್‌ ಅಧ್ಯಕ್ಷ ವೊಲೊದಿಮಿರ್‌ ಜೆಲನ್‌ಸ್ಕಿ, ರಷ್ಯಾದೊಂದಿಗೆ ಶಾಂತಿ ಮಾತುಕತೆ ನಡೆಸೋ ಸಮಯ ಬಂದಿದೆ ಅಂತ ಹೇಳಿದ್ದಾರೆ. ವೀಡಿಯೋ ಒಂದರಲ್ಲಿ ಮಾತಡಿರೋ ಅವ್ರು, ಮಾಸ್ಕೋದಲ್ಲಿ ಇರೋರು ನನ್ನ ಮಾತು ಕೇಳಿಸ್ಕೋತಾ ಇದಾರೆ ಅಂದ್ಕೊತೀನಿ. ಸಭೆ ನಡೆಸೊ ಸಮಯ ಈಗ ಬಂದಿದೆ, ಇದು ಮಾತಡೋ ಹೊತ್ತು. ಯುಕ್ರೇನ್‌ ಪ್ರಾದೇಶಿಕ ಸಮಗ್ರತೆ ಮತ್ತು ನ್ಯಾಯವನ್ನ ಪುನರ್‌ ಸ್ಥಾಪಿಸೋ ಸಮಯ ಬಂದಿದೆ, ಇಲ್ಲ ಅಂದ್ರೆ ರಷ್ಯಾ ಹಲವು ತಲೆಮಾರು ಕಳೆದ್ರೂ ರಿಕವರ್‌ ಮಾಡದೇ ಇರೋವಷ್ಟು ನಷ್ಟ ಅನುಭವಿಸಿ ಬಿಡುತ್ತೆ ಅಂತ ಹೇಳದ್ದಾರೆ. ಇನ್ನು ಆ ಕಡೆ ರಷ್ಯಾ ಕೂಡ ನಾವು ಹೆಚ್ಚೂ ಕಡಿಮೆ ಮಾತುಕತೆಯನ್ನ ಯುಕ್ರೇನ್‌ ತಟಸ್ಥ ರಾಷ್ಟ್ರ ಆಗೋ ಕಡೆಗೆ ತಂದಿದೀವಿ ಅಂತ ಹೇಳಿದೆ. ಈ ಸಂಬಂಧ ಮಾತಾಡಿರೋ ರಷ್ಯಾದ ಸಂಧಾನಕಾರ ವ್ಲಾದಿಮಿರ್‌ ಮೆಡಿನ್‌ಸ್ಕಿ, ತಟಸ್ಥವಾಗಿ ಉಳಿಯೋದು ಮತ್ತು ಯುಕ್ರೇನ್‌ ನ್ಯಾಟೋಗೆ ಸೇರದೇ ಇರೋದು ಮಾತುಕತೆಯ ಮುಖ್ಯ ಅಂಶ ಆಗಿತ್ತು. ಈ ಅಂಶದ ಬಗ್ಗೆ ಎರಡೂ ಕಡೆಯವ್ರು ಹತ್ತಿರ ಬಂದಿದ್ದೇವೆ ಅಂತ ಹೇಳಿದ್ದಾರೆ. ಆದ್ರೆ ಯುಕ್ರೇನ್‌ ಭದ್ರತಾ ಭರವಸೆ ಕೇಳಿದಾಗ ಅಲ್ಲಿ ಸಣ್ಣ ವ್ಯತ್ಯಾಸಗಳು ಇದ್ವು ಅಂತ ಹೇಳಿದೆ. ಆದ್ರೆ ಯುಕ್ರೇನ್‌ ಅ‍ಧ್ಯಕ್ಷರ ಸಲಹೆಗಾರ ಮಿಖೈಲೊ ಪೊಡೊಲ್ಯಾಕ್‌ ಮಾತ್ರ, ರಷ್ಯಾ ತನ್ನ ಮನವಿಗಳ ಬಗ್ಗೆ ಅಷ್ಟೇ ಹೇಳಿದೆ, ನಮ್ಮ ಬೇಡಿಕೆಗಳಿಂದ ನಾವು ಹಿಂದೆ ಸರಿದಿಲ್ಲ. ರಷ್ಯಾ ಕದನವಿರಾಮ ಘೋಷಿಸಿ, ಸೇನೆಯನ್ನ ಹಿಂದಕ್ಕೆ ತಗೊಂಡು, ಗಟ್ಟಿಯಾದ ಭದ್ರತಾ ಭರವಸೆ ನೀಡ್ಬೇಕು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply