ರಾಜ್ಯದಲ್ಲಿ ಸಿಎಂ ಬದಲಾವಣೆ ಪಕ್ಕಾ?

masthmagaa.com:

ರಾಜ್ಯದಲ್ಲಿ ಸಿಎಂ ಬದಲಾವಣೆಗೆ ಸಿಎಂ ಯಡಿಯೂರಪ್ಪ ಒಪ್ಪಿದಂತೆ ಕಾಣ್ತಿದೆ. ಇದಕ್ಕೆ ಕಾರಣ ಇಷ್ಟುದಿನ ಸಿಎಂ ಬದಲಾವಣೆ ಬಗ್ಗೆ ಹೈಕಮಾಂಡ್​ ಜೊತೆ ಮಾತಾಡಿಲ್ಲ, ಮಾತಾಡಿಲ್ಲ ಅಂತಿದ್ದ ಸಿಎಂ ಯಡಿಯೂರಪ್ಪ ಇವತ್ತು, ಹೈಕಮಾಂಡ್​ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರ್ತೀನಿ ಅಂತ ಹೇಳಿದ್ದಾರೆ. ಅಂದ್ಹಾಗೆ ಸಿಎಂ ಬದಲಾಗಬಹುದು ಅನ್ನೋ ವಿಚಾರ ಗೊತ್ತಾಗ್ತಿದ್ದಂತೇ ಇವತ್ತು ಹತ್ತಾರು ಸ್ವಾಮೀಜಿಗಳು ಬಂದು ಯಡಿಯೂರಪ್ಪ ಅವರನ್ನ ಭೇಟಿಯಾಗಿದ್ದಾರೆ. ಈ ವೇಳೆ ಸ್ವಾಮೀಜಿಗಳು ಸಿಎಂರನ್ನ ಕೇಳಿದಾಗ, ಏನಾಗಿದೆ, ಎಂತ ಆಗಿದೆ ಅನ್ನೋ ಬಗ್ಗೆ ನಾನೇನು ಮಾತನಾಡಲ್ಲ. ಹೈಕಮಾಂಡ್​ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರಬೇಕಾಗುತ್ತೆ ಅಂತ ಹೇಳಿದ್ದಾರೆ ಅಂತ ದಿಂಗಾಲೇಶ್ವರ ಶ್ರೀ ಹೇಳಿದ್ಧಾರೆ. ಜೊತೆಗೆ ಯಡಿಯೂರಪ್ಪ ಅವರನ್ನ ಬದಲಾಯಿಸಿದ್ರೆ ರಾಜ್ಯದಲ್ಲಿ ಬಿಜೆಪಿ ಸರ್ವನಾಶ ಆಗುತ್ತೆ. ಅವರ ಪಕ್ಷದ ನಾಯಕು ಮುಂದೊಂದು ದಿನ ಅದರ ಪರಿಣಾಮ ಎದುರಿಸಬೇಕಾಗುತ್ತೆ ಅಂತಾನೂ ದಿಂಗಾಲೇಶ್ವರ ಶ್ರೀಗಳು ಎಚ್ಚರಿಸಿದ್ದಾರೆ. ಹೈಕಮಾಂಡ್ ತನ್ನ ನಿರ್ಧಾರವನ್ನ ಬದಲಾಯಿಸದಿದ್ರೆ ಮೂರ್ನಾಲ್ಕು ದಿನಗಳಲ್ಲಿ ಸುಮಾರು 500 ಮಠಾಧೀಶರನ್ನ ಸೇರಿಸಿ ಸಭೆ ಸೇರ್ತೀವಿ ಅಂತಾನೂ ಹೇಳಿದ್ದಾರೆ. ಹಲವು ಸ್ವಾಮೀಜಿಗಳು ಸಿಎಂ ಯಡಿಯೂರಪ್ಪ ಬೆನ್ನಿಗೆ ನಿಂತಿದ್ದಾರೆ. ಮತ್ತೊಂದುಕಡೆ ಕಾಂಗ್ರೆಸ್ ನಾಯಕ ಎಂ.ಬಿ. ಪಾಟಿಲ್​ ಮಾತನಾಡಿ, ಯಡಿಯೂರಪ್ಪ ಲಿಂಗಾಯತ ಸಮುದಾಯದ ದೊಡ್ಡ ನಾಯಕ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಅವರೇ ಕಾರಣ. ಅವರ ವಯಸ್ಸಿಗೆ ಬಿಜೆಪಿ ಗೌರವ ಕೊಡಬೇಕು. ಅವರನ್ನ ದುರ್ಬಲ ಮಾಡಲಾಗಿದೆ. ಲಿಂಗಾಯತ ಸಮುದಾಯದ ನಾಯಕನಾಗಿ ನನಗಿದು ನೋವಾಗುತ್ತೆ ಅಂತ ಎಂ.ಬಿ. ಪಾಟೀಲ್​ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply