ಯಡಿಯೂರಪ್ಪ ಉತ್ತರ ಕೇಳಿ ಮಾಧ್ಯಮದವರಿಗೇ ಶಾಕ್!

masthmagaa.com:

ರಾಜಭವನಕ್ಕೆ ತೆರಳಿ ರಾಜಿನಾಮೆ ಕೊಟ್ಟು ಹೊರಬಂದಾಗ ಬಿಎಸ್ ಯಡಿಯೂರಪ್ಪ, ಕರ್ನಾಟಕದ ಮುಂದಿನ ಸಿಎಂ ಯಾರು? ನೀವು ಇನ್ಮೇಲೆ ರಾಜಕಾರಣ ಫುಲ್ ಬಿಟ್ಟೇ ಬಿಡ್ತೀರಾ? ಅಂತಾ ಕೇಳಿದಾಗ ಕೊಟ್ಟ ಉತ್ತರ ಕೇಳಿ ಒಂದು ಕ್ಷಣ ಮಾದ್ಯಮದವರೇ ದಂಗಾಗಿದ್ದಾರೆ. ‘ನಾನು ರಾಜ್ಯಪಾಲ ಸೇರಿದಂತೆ ಯಾವುದೇ ಹುದ್ದೆಯನ್ನ ಒಪ್ಪಿಕೊಳ್ಳೋದಿಲ್ಲ. ಆದ್ರೆ ನಿರಂತರ ಪಕ್ಷ ಸಂಘಟನೆಯ ಕೆಲಸ ಮಾಡ್ತೀನಿ. ನಾಳೆಯಿಂದಲೇ ಪಕ್ಷ ಬಲಪಡಿಸೋ ಕೆಲಸ ಶುರು ಮಾಡ್ತೀನಿ’ ಅಂತ ಹೇಳಿದ್ದಾರೆ. ಈ ಮೂಲಕ ತನಗೆ ವಯಸ್ಸಾದರೂ, ಸಿಎಂ ಹುದ್ದೆಯಿಂದ ಇಳಿದರೂ ಕರ್ನಾಟಕದ ರಾಜಕಾರಣದಲ್ಲಿ ತಮ್ ಇನ್ನಿಂಗ್ಸ್ ಇನ್ನೂ ಮುಗಿದಿಲ್ಲ ಅನ್ನೋ ಸಂದೇಶ ರವಾನಿಸಿದ್ದಾರೆ. ಹಾಗೇ ಮುಂದೆ ಯಾರು ಸಿಎಂ ಆಗಬೇಕು ಅಂತ ನಾನು ಯಾವುದೇ ಹೆಸರನ್ನ ಶಿಫಾರಸು ಮಾಡೋದಿಲ್ಲ ಅಂತಲೂ ಯಡಿಯೂರಪ್ಪ ಹೇಳಿದ್ದಾರೆ. ಪಕ್ಷ ಯಾರನ್ನೇ ಸಿಎಂ ಮಾಡಿದರೂ, ಎಲ್ಲರೂ ಅವರಿಗೆ ಸಹಕಾರ ಕೊಟ್ಟು ಚೆನ್ನಾಗಿ ನಡೆಸಿಕೊಂಡು ಹೋಗುತ್ತಾರೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜೊತೆಗೆ, ನನಗೆ ರಾಜಿನಾಮೆ ಕೊಡಲು ದಿಲ್ಲಿಯಿಂದ ಯಾವುದೇ ಒತ್ತಡ ಇರಲಿಲ್ಲ. ‘2 ತಿಂಗಳ ಹಿಂದೇನೇ ರಾಜಿನಾಮೆಗೆ ನಿರ್ಧರಿಸಿದ್ದೆ. ಈಗಲೂ 2 ವರ್ಷ ಪೂರೈಸಿದ ಶುಭ ಸಂದರ್ಭದಲ್ಲಿ ನಾನೇ ವಾಲಂಟರಿಯಾಗಿ (ಸ್ವಯಂ ಪ್ರೇರಣೆಯಿಂದ) ರಾಜಿನಾಮೆ ನೀಡಿದ್ದೇನೆ. ಪಕ್ಷದಲ್ಲಿ ಹೊಸಬರಿಗೆ ಅವಕಾಶ ಕೊಡಲು ದಾರಿ ಮಾಡಿಕೊಟ್ಟಿದ್ದೇನೆ’ ಅಂತ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply