ಅಮೆರಿಕ ಸಂಸತ್ ಉದ್ದೇಶಿಸಿ ಯುಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್‌ ಜೆಲನ್‌ಸ್ಕಿ ವರ್ಚುವಲ್‌ ಭಾಷಣ

masthmagaa.com:

ಅಮೇರಿಕದ ಸಂಸತ್ತನ್ನ ಉದ್ದೇಶಿಸಿ ಬುಧವಾರ ಯುಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್‌ ಜೆಲನ್‌ಸ್ಕಿ ವರ್ಚುವಲ್‌ ಭಾಷಣ ಮಾಡಲಿದ್ದಾರೆ. ರಷ್ಯಾ ಮತ್ತು ಯುಕ್ರೇನ್‌ ಮಧ್ಯ ಮೂರನೇ ಸುತ್ತಿನ ಮಾತುಕತೆ ನಡೆಯುತ್ತಿರುವ ಬೆನ್ನಲ್ಲೇ ಈ ಮನವಿ ಬಂದಿದೆ. ಈ ಸಂಬಂಧ ಜಂಟಿ ಹೇಳಿಕೆ ನೀಡಿರೋ ಹೌಸ್‌ ಲೀಡರ್‌ ನ್ಯಾನ್ಸಿ ಪೆಲೊಸಿ ಮತ್ತು ಸೆನೇಟ್‌ ಲೀಡರ್‌ ನಾಯಕ ಚುಕ್‌ ಶುಮರ್‌, ನಾವು ಯುಕ್ರೇನ್‌ ಅಧ್ಯಕ್ಷ ಜೆಲನ್‌ಸ್ಕಿಯವರನ್ನ ಹೌಸ್‌ ಮತ್ತು ಸೆನೇಟ್‌ ಉದ್ದೇಶಿಸಿ (ಅಮೇರಿಕದಲ್ಲಿ ಹೌಸ್‌ ಆಫ್ ರೆಪ್ರೆಸೆಂಟಿಟಿವ್ ಅಂದ್ರೆ ಲೋಕಸಭೆ ತರ, ಸೆನೇಟ್‌ ಅಂದ್ರೆ ರಾಜ್ಯಸಭೆ ತರ) ಮಾತಾಡೋಕೆ ಸ್ವಾಗತಿಸುತ್ತೇವೆ ಅಂತ ಹೇಳಿದ್ದಾರೆ. ಅಮೇರಿಕದ ಕಾಂಗ್ರೆಸ್‌ ಅಂದ್ರೆ ಸಂಸತ್ತು ವಿದೇಶಾಂಗ ವ್ಯವಹಾರಗಳಲ್ಲಿ ಹೆಚ್ಚು ತಲೆ ಹಾಕಲ್ಲ. ಆದ್ರೆ ಈ ಬಾರಿ ಅಮೇರಿಕ ರಷ್ಯಾ ವಿರುದ್ಧ ಇನ್ನೂ ಬೋಲ್ಡ್‌ ಆದ ನಿಲುವು ತಗೋಬೇಕು ಅಂತ ಒತ್ತಡ ಹಾಕ್ತಿದೆ. ಇನ್ನು ಆ ಕಡೆ ಕೆನಡಾ ಪಾರ್ಲಿಮೆಂಟ್‌, ಕೆನಡಿಯನ್‌ ಹೌಸ್‌ ಆಫ್‌ ಕಾಮನ್ಸ್‌ನ ಸ್ಪೀಕರ್‌ ಆಂಥೊನಿ ರೊಟಾ ಕೂಡ ಮಂಗಳವಾರ ತಮ್ಮ ಸಂಸದರನ್ನ ಉದ್ದೇಶಿಸಿ ಜೆಲನ್‌ಸ್ಕಿ ಮಾತಾಡ್ತಾರೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply