ಫೈನಲ್‌ ರಿಸಲ್ಟ್: ಬಿಜೆಪಿಗೆ‌ 4 ರಾಜ್ಯ.. AAPಗೆ 1

masthmagaa.com:

ದೇಶದ ರಾಜಕೀಯ ಭವಿಷ್ಯವನ್ನೇ ಬದಲಾಯಿಸೋ ಚುನಾವಣೆ ಎಂದೇ ಭಾವಿಸಲಾಗಿದ್ದ ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಅಂದುಕೊಂಡಿದ್ದನ್ನು ಸಾಧಿಸಿದೆ. ಐದರಲ್ಲಿ 4ನ್ನು ಗೆದ್ದು, ಹೊಸ ಅಧ್ಯಾಯಕ್ಕೆ ಮುನ್ನುಡಿ ಹಾಡಿದೆ. ಹೊಸ ದಾಖಲೆಗಳನ್ನ ಬರೆದಿದೆ. ಅದೇ ರೀತಿ ದೆಹಲಿಯಲ್ಲಿದ್ದ ಆಮ್ ಆದ್ಮಿ ಪಕ್ಷ ಈಗ ಪಂಜಾಬ್​ ಗದ್ದುಗೆ ಕಂಟ್ರೋಲ್​ಗೆ ತಗೊಂಡಿದೆ. ದಶಕಗಳ ಕಾಲ ದೇಶವಾಳಿದ ಕಾಂಗ್ರೆಸ್ ಐದಕ್ಕೆ ಐದೂ ರಾಜ್ಯಗಳಲ್ಲಿ ಹೇಳ ಹೆಸರಿಲ್ಲದಂತೆ ಕೊಚ್ಚಿ ಹೋಗಿದೆ. 403 ಕ್ಷೇತ್ರಗಳಿರೋ ಉತ್ತರ ಪ್ರದೇಶದಲ್ಲಿ ಒಂದಕಿಗೆ ಸೀಮಿತವಾಗಿ ಉಳಿದುಕೊಂಡಿದೆ. ಪಂಜಾಬ್​​ನಲ್ಲಿ ಆಡಳಿತ ವಿರೋಧಿ ಅಲೆಯಲ್ಲಿ ದೊಡ್ಡ ದೊಡ್ಡ ತಲೆಗಳೇ ಉರುಳಿ ಹೋಗಿವೆ. ಉತ್ತರಾಖಂಡ್​, ಉತ್ತರ ಪ್ರದೇಶ, ಮಣಿಪುರ ಮತ್ತು ಗೋವಾದಲ್ಲಿ ಎರಡನೇ ಬಾರಿಗೆ ಆಡಳಿತ ಗದ್ದುಗೆ ಏರುವ ಮೂಲಕ ಬಿಜೆಪಿ ದಾಖಲೆ ಬರೆದಿದೆ. ಹಾಗಾದ್ರೆ ಯಾವ ರಾಜ್ಯದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಸಿಕ್ಕಿದೆ? ವೋಟ್​​ ಶೇರ್​​ ಎಷ್ಟೆಷ್ಟು ಇದೆ.. ಎಲ್ಲವನ್ನೂ ನೋಡೋಣ..

1. ಉತ್ತರ ಪ್ರದೇಶ
ಬಿಜೆಪಿ+: 268 (-54)
ಎಸ್​ಪಿ+: 130 (+78)
ಕಾಂಗ್ರೆಸ್: 2 (-5)
ಬಿಎಸ್​ಪಿ: 1 (-18)
ಇತರೆ: 4‌

ವೋಟ್‌ ಶೇರ್
ಬಿಜೆಪಿ: 42%
ಎಸ್​ಪಿ: 32%
ಬಿಎಸ್​ಪಿ: 12%
ಆರ್​ಎಲ್​ಡಿ: 3%

2. ಪಂಜಾಬ್
ಎಎಪಿ: 92 (+72)
ಕಾಂಗ್ರೆಸ್: 18 (-59)
ಎಸ್ಎಡಿ: 3 (-12)
ಬಿಜೆಪಿ: 2 (-1)
ಇತರೆ: 2

ವೋಟ್‌ ಶೇರ್
ಎಎಪಿ: 42%
ಕಾಂಗ್ರೆಸ್: 23%
ಎಸ್​ಎಡಿ: 18%
ಬಿಜೆಪಿ: 6%

3. ಉತ್ತರಾ ಖಂಡ್
ಬಿಜೆಪಿ: 47 (-10)
ಕಾಂಗ್ರೆಸ್: 19 (+6)
ಬಿಎಸ್​ಪಿ: 2 (+2)
ಇತರೆ: 2

ವೋಟ್‌ ಶೇರ್
ಬಿಜೆಪಿ: 44%
ಕಾಂಗ್ರೆಸ್​: 38%
ಬಿಎಸ್​ಪಿ: 4%

4. ಗೋವಾ
ಬಿಜೆಪಿ: 20 (+7)
ಕಾಂಗ್ರೆಸ್: 11 (-6)
ಪಕ್ಷೇತರ: 3 (-)
ಎಎಪಿ: 2 (+2)
ಎಂಜಿಪಿ: 2 (-1)
ಇತರೆ: 2

ವೋಟ್‌ ಶೇರ್
ಬಿಜೆಪಿ: 33%
ಕಾಂಗ್ರೆಸ್: 23%
ಎಂಜಿಪಿ: 7%
ಎಎಪಿ: 6%

5. ಮಣಿಪುರಾ
ಬಿಜೆಪಿ: 32 (+11)
ಎನ್​ಪಿಪಿ: 8 (+4)
ಜೆಡಿಯು: 6 (+6)
ಎನ್​ಪಿಎಫ್​: 5 (+1)
ಕಾಂಗ್ರೆಸ್: 4 (-24)
ಇತರೆ: 5

ವೋಟ್‌ ಶೇರ್
ಬಿಜೆಪಿ: 37%
ಎನ್​ಪಿಪಿ: 17%
ಕಾಂಗ್ರೆಸ್: 16%
ಜೆಡಿಯು: 11%
-masthmagaa.com

Contact Us for Advertisement

Leave a Reply