ಬ್ರಿಟಿಷನರಿಗೆ ಗುನ್ನಾ ಹೊಡೆದ ಭಾರತ! ಯಾಕೆ..? ಏನು..?

masthmagaa.com:

ಸೋಮವಾರದಿಂದ ಭಾರತಕ್ಕೆ ಬರೋ ಎಲ್ಲಾ ಬ್ರಿಟಿಷ್ ನಾಗರಿಕರಿಗೆ 10 ದಿನ ಕ್ವಾರಂಟೈನ್ ಕಡ್ಡಾಯವಾಗಲಿದೆ. ಲಸಿಕೆ ಹಾಕಿಸಿಕೊಂಡಿರಲಿ.. ಹಾಕದೇ ಇರಲಿ.. ಎಲ್ಲರಿಗೂ ಕ್ವಾರಂಟೈನ್ ಕಡ್ಡಾಯ.. ಜೊತೆಗೆ ಯುನೈಟೆಡ್ ಕಿಂಗ್​ಡಮ್​​ನಿಂದ ಹೊರಡುವ 72 ಗಂಟೆ ಮುನ್ನ ಒಮ್ಮೆ, ಬಂದ ಬಳಿಕ ಒಂದ್ಸಲ ಆಮೇಲೆ 8 ದಿನಗಳ ಬಳಿಕ ಮತ್ತೆ ಆರ್​ಟಿಪಿಸಿಆರ್ ಪರೀಕ್ಷೆ ಮಾಡಿಸಬೇಕು ಅಂತ ಸರ್ಕಾರಿ ಮೂಲಗಳು ತಿಳಿಸಿವೆ. ಭಾರತ ಸೇರಿದಂತೆ ಹಲವು ದೇಶಗಳಿಂದ ಯುನೈಟೆಡ್ ಕಿಂಗ್​ಡಮ್​​ಗೆ ಹೋಗುವ ನಾಗರಿಕರಿಗೂ ಈ ರೂಲ್ಸ್ ಜಾರಿಯಲ್ಲಿದೆ. ಅಂದ್ರೆ ಭಾರತದ ಲಸಿಕೆ ಸರ್ಟಿಫಿಕೇಟ್​​ಗೆ ಯುನೈಟೆಡ್ ಕಿಂಗ್​​ಡಮ್ ಮಾನ್ಯತೆ ನೀಡಿಲ್ಲ. ಇದಕ್ಕೆ ಭಾರಿ ವಿರೋಧ ಕೂಡ ವ್ಯಕ್ತವಾಗಿತ್ತು. ಅದ್ರ ಬೆನ್ನಲ್ಲೇ ಭಾರತ ಈ ರೀತಿ ತಿರುಗುಬಾಣ ಹೂಡಿದೆ.

-masthmagaa.com

Contact Us for Advertisement

Leave a Reply