ಮಹಾರಾಷ್ಟ್ರದಲ್ಲಿ 1 ಸಾವಿರಕ್ಕೂ ಹೆಚ್ಚು ಪೊಲೀಸರಿಗೆ ಕೊರೋನಾ..!

masthmagaa.com:

ಕೊರೋನಾ ಆರ್ಭಟಕ್ಕೆ ನಲುಗಿರೋ ಮಹಾರಾಷ್ಟ್ರದಲ್ಲಿ 1,001 ಮಂದಿ ಪೊಲೀಸ್ ಸಿಬ್ಬಂದಿಗೆ ಸೋಂಕು ತಗುಲಿದೆ. ಇದರಲ್ಲಿ 8 ಮಂದಿ ಪ್ರಾಣ ಕಳೆದುಕೊಂಡಿದ್ದು, 142 ಮಂದಿ ಗುಣಮುಖರಾಗಿದ್ದಾರೆ. ಇನ್ನೂ 851 ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಅಂತ ಮಹಾರಾಷ್ಟ್ರ ಪೊಲೀಸ್ ಇಲಾಖೆ ತಿಳಿಸಿದೆ. ಈ ಮೂಲಕ ಮಹಾರಾಷ್ಟ್ರದಲ್ಲೇ ಅತಿ ಹೆಚ್ಚು  ಪೊಲೀಸರಿಗೆ ಸೋಂಕು ತಗುಲಿದಂತಾಗಿದೆ.

ಕಾಯಿಲೆ ವಿರುದ್ಧದ ಹೋರಾಟದಲ್ಲಿ ಪೊಲೀಸರ ಪಾತ್ರ ಮುಖ್ಯವಾದುದು. ಲಾಕ್​ಡೌನ್​ನಂತಹ ಯಾವುದೇ ನಿರ್ಧಾರವನ್ನ ಸರ್ಕಾರ ಕೈಗೊಂಡರೂ ಅದು ಪಾಲನೆಯಾಗುವಂತೆ ನೋಡಿಕೊಳ್ಳುವ ಕೆಲಸ ಪೊಲೀಸರದ್ದು. ಇಂತಹ ಪೊಲೀಸರಿಗೇ ಕಾಯಿಲೆ ಹರಡುತ್ತಿರೋದು ಆತಂಕದ ವಿಚಾರ.

ಮಹಾರಾಷ್ಟ್ರದಲ್ಲಿ ಇದುವರೆಗೆ ಒಟ್ಟು 25,922 ಜನರಿಗೆ ಕಾಯಿಲೆ ಹರಡಿದೆ. ಈ ಪೈಕಿ 975 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಸಾವಿರದ ಗಡಿಯತ್ತ ಹೋಗಿದೆ. ದೇಶದಲ್ಲಿರುವ ಒಟ್ಟು ಸೋಂಕಿತರ ಪೈಕಿ ಮೂರನೇ ಒಂದರಷ್ಟು ಕಾಯಿಲೆ ಪೀಡಿತರು ಮಹಾರಾಷ್ಟ್ರದಲ್ಲೇ ಇದ್ದಾರೆ.

-masthmagaa.com

Contact Us for Advertisement

Leave a Reply