masthmagaa.com:

ಕಳೆದ ಡಿಸೆಂಬರ್​ನಲ್ಲಿ ಕೊರೋನಾ ವೈರಸ್ ಮೊದಲು​ ಕಾಣಿಸಿಕೊಂಡ ಚೀನಾದಲ್ಲಿ ಮತ್ತೆ 108 ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ 98 ಪ್ರಕರಣಗಳು ವಿದೇಶದಿಂದ ಬಂದವರಲ್ಲಿ ದೃಢಪಟ್ಟಿದ್ದು, 10 ಪ್ರಕರಣಗಳು ಸ್ಥಳೀಯವಾಗಿ ಹರಡಿದ್ದಾಗಿದೆ. ಕಳೆದ 24 ಗಂಟೆಗಳಲ್ಲಿ ಕೊರೋನಾ ಸೋಂಕಿಗೆ ಇಬ್ಬರು ಬಲಿಯಾಗಿದ್ದಾರೆ. ಇದರ ಜೊತೆಗೆ ರೋಗ ಲಕ್ಷಣ ಕಾಣಿಸದ 61 ಪ್ರಕರಣಗಳು ಪತ್ತೆಯಾಗಿದೆ ಅಂತ ಚೀನಾ ಸರ್ಕಾರ ಹೇಳಿದೆ.

ಈ ಮೂಲಕ ಚೀನಾದಲ್ಲಿ ಇದುವರೆಗೆ ಸೋಂಕು ದೃಢಪಟ್ಟವರ ಸಂಖ್ಯೆ 82,160ಕ್ಕೆ ಏರಿಕೆಯಾಗಿದ್ದು, 3,041 ಜನ ಮೃತಪಟ್ಟಿದ್ದಾರೆ. ಜೊತೆಗೆ ರೋಗ ಲಕ್ಷಣ ಕಾಣಿಸದ 1,064 ಮಂದಿಯನ್ನ ತೀವ್ರ ನಿಗಾದಲ್ಲಿ ಇಡಲಾಗಿದೆ. ಇನ್ನು ಭಾನುವಾರ ಒಂದೇ ದಿನ 88 ರೋಗಿಗಳು ಡಿಸ್ಚಾರ್ಜ್​ ಆಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 77,663ಕ್ಕೆ ಏರಿಕೆಯಾಗಿದೆ.

ಚೀನಾದಲ್ಲಿ ಕೊರೋನಾ ಹಾವಳಿ ಕಮ್ಮಿಯಾದ ಹಿನ್ನೆಲೆ ಲಾಕ್​ಡೌನ್ ತೆರವುಗೊಳಿಸಲಾಗಿತ್ತು. ಆದ್ರೀಗ ಮತ್ತೆ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿರೋದು ಚೀನಾದ ಚಿಂತೆ ಹೆಚ್ಚಿಸಿದೆ.

-masthmagaa.com

Contact Us for Advertisement

Leave a Reply