ಬೆಂಗಳೂರಿನಲ್ಲಿ ಮತ್ತೆ ಕೊರೋನಾ ಸ್ಫೋಟ.. ಲಾಕ್​ಡೌನ್ ಆಗುತ್ತಾ..?

masthmagaa.com:

ಕರ್ನಾಟಕದಲ್ಲಿ ಇವತ್ತು ದಾಖಲೆಯ 1,267 ಮಂದಿಗೆ ಹೊಸದಾಗಿ ಸೋಂಕು ಹರಡಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 13,190 ಆಗಿದೆ. ರಾಜ್ಯದಲ್ಲಿ ಇವತ್ತು ಈ ಸೋಂಕಿಗೆ ಸಂಬಂಧಪಟ್ಟಂತೆ ಬರೋಬ್ಬರಿ 16 ರೋಗಿಗಳು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಒಟ್ಟು 207 ಜನ ಸೋಂಕಿತರು ಮೃತಪಟ್ಟಂತಾಗಿದೆ. ಇದುವರೆಗೆ 7,507 ಮಂದಿ ಗುಣಮುಖರಾಗಿದ್ದಾರೆ. 5,472 ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೀತಿದಾರೆ. ಇದರಲ್ಲಿ 243 ಜನ ತೀವ್ರ ನಿಗಾ ಘಟಕದಲ್ಲಿದಾರೆ.

ಇವತ್ತಿನ ಪ್ರಕರಣಗಳು:

ಬೆಂಗಳೂರು – 783

ದಕ್ಷಿಣ ಕನ್ನಡ – 97

ಬಳ್ಳಾರಿ – 71

ಉಡುಪಿ – 40

ಕಲಬುರಗಿ – 34

ಹಾಸನ – 31

ಗದಗ – 30

ಬೆಂಗಳೂರು ಗ್ರಾಮಾಂತರ – 27

ಧಾರವಾಡ – 18

ಮೈಸೂರು – 18

ಬಾಗಲಕೋಟೆ – 17

ಉತ್ತರ ಕನ್ನಡ – 14

ಹಾವೇರಿ – 12

ಕೋಲಾರ – 11

ಬೆಳಗಾವಿ – 8

ಬೀದರ್​ – 7

ಚಿತ್ರದುರ್ಗ – 7

ರಾಯಚೂರು – 6

ಮಂಡ್ಯ – 6

ದಾವಣಗೆರೆ – 6

ವಿಜಯಪುರ – 5

ಶಿವಮೊಗ್ಗ – 4

ಚಿಕ್ಕಬಳ್ಳಾಪುರ -3

ಕೊಪ್ಪಳ – 3

ಚಿಕ್ಕಮಗಳೂರು – 3

ಕೊಡಗು – 3

ತುಮಕೂರು – 2

ಯಾದಗಿರಿ – 1

ರಾಮನಗರ – 0

ಚಾಮರಾಜನಗರ – 0

 

ಇವತ್ತು ಮೃತಪಟ್ಟವರು: 

ಬೆಂಗಳೂರು – 4

ದಕ್ಷಿಣ ಕನ್ನಡ – 3

ಬಾಗಲಕೋಟೆ – 2

ತುಮಕೂರು – 2

ಧಾರವಾಡ – 1

ಹಾಸನ – 1

ಮೈಸೂರು – 1

ಬಳ್ಳಾರಿ – 1

ಕಲಬುರಗಿ – 1

ಇನ್ನು ತೆಲಂಗಾಣ ರಾಜಧಾನಿ ಹೈದರಾಬಾದ್​ನಲ್ಲಿ ಕೊರೋನಾ ಹಾವಳಿ ಹಿನ್ನೆಲೆ ಮತ್ತೆ ಲಾಕ್​ಡೌನ್ ಮಾಡಬೇಕು ಅಂತ ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ಜನ ನಿಯಮಗಳನ್ನ ಪಾಲಿಸದೆ ಸೋಂಕು ಮಿತಿ ಮೀರಿದ್ರೆ ಮತ್ತೆ ಲಾಕ್​ಡೌನ್ ಜಾರಿಗೆ ಬರುವ ಸುಳಿವನ್ನು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಕೊಟ್ಟಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲೂ ಸೋಂಕಿತರ ಸಂಖ್ಯೆ ಇದೇ ರೀತಿ ಹೆಚ್ಚಾದ್ರೆ ಮತ್ತೆ ಲಾಕ್​ಡೌನ್ ಜಾರಿಯಾದ್ರೂ ಅಚ್ಟರಿ ಇಲ್ಲ.

-masthmagaa.com

Contact Us for Advertisement

Leave a Reply