masthmagaa.com:

ರಾಜ್ಯದಲ್ಲಿ ನಿನ್ನೆ ಸಂಜೆ 5 ಗಂಟೆಯಿಂದ ಇಂದು ಮಧ್ಯಾಹ್ನದವರೆಗೆ ಬರೋಬ್ಬರಿ 178 ಕೊರೋನಾ ಪ್ರಕರಣಗಳು ದೃಢಪಟ್ಟಿವೆ ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,711ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಕೊರೋನಾಗೆ ಇದುವರೆಗೆ 47 ಮಂದಿ ಬಲಿಯಾಗಿದ್ದಾರೆ. 869 ಮಂದಿ ಗುಣಮುಖರಾಗಿದ್ದು, 1793 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೊಸದಾಗಿ ಪತ್ತೆಯಾದ 178 ಪ್ರಕರಣಗಳಲ್ಲಿ ಬರೋಬ್ಬರಿ 156 ಮಂದಿ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ದೆಹಲಿಯಿಂದ 5, ರಾಜಸ್ಥಾನ ಮತ್ತು ತಮಿಳುನಾಡಿನಿಂದ ತಲಾ ಒಬ್ಬರು ಬಂದಿದ್ದಾರೆ.  ಐರ್​ಲ್ಯಾಂಡ್​ನಿಂದ ಒಬ್ಬರು ಬಂದಿದ್ದಾರೆ. ಹೀಗೆ ಒಟ್ಟು 178 ಜನರಲ್ಲಿ 164 ಮಂದಿ ಸೋಂಕಿತರು ಹೊರ ರಾಜ್ಯ ಮತ್ತು ಹೊರ ದೇಶದಿಂದ ಬಂದವರೇ ಆಗಿರೋದು ಗಮನಾರ್ಹ.

ಇವತ್ತಿನ ಪ್ರಕರಣಗಳು: 

ರಾಯಚೂರು – 62

ಯಾದಗಿರಿ – 60

ಕಲಬುರಗಿ – 15

ಉಡುಪಿ  – 15

ಬೆಂಗಳೂರು ನಗರ  – 10

ಚಿಕ್ಕಬಳ್ಳಾಪುರ – 4

ದಾವಣಗೆರೆ – 4

ಮಂಡ್ಯ – 2

ಮೈಸೂರು  – 2

ಚಿತ್ರದುರ್ಗ – 1

ಶಿವಮೊಗ್ಗ – 1

ಬೆಂಗಳೂರು ಗ್ರಾಮಾಂತರ  – 1

ಧಾರವಾಡ  – 1

-masthmagaa.com

Contact Us for Advertisement

Leave a Reply