ಬಾದಾಮಿಯಲ್ಲಿ ಕೊರೋನಾ ಸ್ಫೋಟ.. 13 ಜನರಿಗೆ ಸೋಂಕು..!

masthmagaa.com:

ರಾಜ್ಯದಲ್ಲಿ ನಿನ್ನೆ ಸಂಜೆಯಿಂದ ಇವತ್ತು ಮಧ್ಯಾಹ್ನದವರೆಗೆ ಮತ್ತೆ 19 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ ಅಂತ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಶಾಕಿಂಗ್ ಅಂದ್ರೆ ಬಾಗಲಕೋಟೆಯ ಬಾದಾಮಿಯಲ್ಲೇ 13 ಜನರಿಗೆ ಸೋಂಕು ತಗುಲಿದೆ. ಈ 13 ಮಂದಿಯಲ್ಲಿ 12 ಮಂದಿ ರೋಗಿ ನಂಬರ್ 607ರ ಸಂಪರ್ಕಕ್ಕೆ ಬಂದವರಾಗಿದ್ದಾರೆ. ರೋಗಿ ನಂಬರ್ 607 ಬಾದಾಮಿಯ 23 ವರ್ಷದ ಯುವತಿ ಆಗಿದ್ದಾರೆ.

ಇನ್ನುಳಿದಂತೆ ದಕ್ಷಿಣ ಕನ್ನಡದಲ್ಲಿ 3, ಬೆಂಗಳೂರು ನಗರದಲ್ಲಿ 2 ಹಾಗೂ ಕಲಬುರಗಿಯಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ. ಹೊಸ 19 ಪ್ರಕರಣಗಳೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 692ಕ್ಕೆ ಏರಿಕೆಯಾಗಿದೆ. ಇದುವರೆಗೆ 29 ಮಂದಿ ಮೃತಪಟ್ಟಿದ್ದು, 345 ಮಂದಿ ಗುಣಮುಖರಾಗಿದ್ದಾರೆ.

-masthmagaa.com

Contact Us for Advertisement

Leave a Reply