masthmagaa.com:

ರಾಜ್ಯದಲ್ಲಿ ನಿನ್ನೆ ಸಂಜೆ 5 ಗಂಟೆಯಿಂದ ಇಂದು ಮಧ್ಯಾಹ್ನದವರೆಗೆ 196 ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,939ಕ್ಕೆ ಏರಿಕೆಯಾಗಿದೆ. ಒಂದೇ ದಿನದಲ್ಲಿ ಈ ಪ್ರಮಾಣದ ಸೋಂಕಿತರು ಪತ್ತೆಯಾಗಿರೋದು ಇದೇ ಮೊದಲು. ಈ ಹಿಂದೆ ಅತಿ ಹೆಚ್ಚು 149 ಪ್ರಕರಣಗಳು ದೃಢಪಟ್ಟಿದ್ದವು.

ಕೊರೋನಾಗೆ ರಾಜ್ಯದಲ್ಲಿ ಮತ್ತೊಬ್ಬರು ಬಲಿಯಾಗಿದ್ದು, ಮೃತಪಟ್ಟವರ ಸಂಖ್ಯೆ 42ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 32 ವರ್ಷದ ಪುರುಷ (ರೋಗಿ ನಂಬರ್ 1270) ಮೃತಪಟ್ಟಿದ್ಧಾರೆ. ದಕ್ಷಿಣ ಕನ್ನಡದಲ್ಲಿ ರೋಗಿ ನಂಬರ್ 1783 ಮೃತಪಟ್ಟಿದ್ದು, ಅದು ಕೊರೋನಾಗೆ ಸಂಬಂಧಿತ ಸಾವು ಅಲ್ಲ ಅಂತ ಆರೋಗ್ಯ ಇಲಾಖೆ ತಿಳಿಸಿದೆ.

ಹೊಸದಾಗಿ ಪತ್ತೆಯಾದ 196 ಪ್ರಕರಣಗಳ ಪೈಕಿ ಯಾದಗಿರಿ ಜಿಲ್ಲೆಯೊಂದರಲ್ಲೇ 72 ಪ್ರಕರಣಗಳು ದೃಢಪಟ್ಟಿವೆ. ಇವರೆಲ್ಲರೂ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ರಾಯಚೂರಿನಲ್ಲಿ 39, ಮಂಡ್ಯದಲ್ಲಿ 28 ಜನರಿಗೆ ಸೋಂಕು ತಗುಲಿದೆ.

ಇವತ್ತಿನ ಪ್ರಕರಣಗಳು: 

ಯಾದಗಿರಿ – 72

ರಾಯಚೂರು  – 39

ಮಂಡ್ಯ – 28

ಚಿಕ್ಕಬಳ್ಳಾಪುರ – 20

ಗದಗ – 15

ಬೆಂಗಳೂರು ನಗರ – 4

ಹಾಸನ – 4

ದಕ್ಷಿಣ ಕನ್ನಡ – 3

ದಾವಣಗೆರೆ – 3

ಕೋಲಾರ – 2

ಉತ್ತರ ಕನ್ನಡ – 2

ಧಾರವಾಡ  – 1

ಉಡುಪಿ – 1

ಕಲಬುರಗಿ –  1

ಬೆಳಗಾವಿ – 1

-masthmagaa.com

Contact Us for Advertisement

Leave a Reply