ಮಧ್ಯಪ್ರದೇಶದಲ್ಲಿ ಸರಕು ಸಾಗಣೆ ರೈಲುಗಳ ಡಿಕ್ಕಿ..! ಮೂವರ ದುರ್ಮರಣ

ಬೋಪಾಲ್​: 2 ಸರಕು ಸಾಗಣೆ ರೈಲುಗಳು ಮುಖಾಮುಖಿ ಡಿಕ್ಕಿಯಾಗಿದ್ದು, ಅದರಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಮಧ್ಯಪ್ರದೇಶದ ಸಿಂಗ್ರೌಲಿಯಲ್ಲಿ ಬೆಳಗ್ಗೆ 5 ಗಂಟೆಗೆ ಈ ದುರ್ಘಟನೆ ಸಂಭವಿಸಿದೆ. ನ್ಯಾಷನಲ್ ಥರ್ಮಲ್ ಕಾರ್ಪೊರೇಷನ್​​ಗೆ ಸೇರಿದ ರೈಲುಗಳಾಗಿದ್ದು, ಒಂದು ಉತ್ತರ ಪ್ರದೇಶದ ರಿಹಾಂದ್ ನಗರದ ಎನ್​​ಟಿಪಿಸಿ ಪ್ಲಾಂಟ್​​​ಗೆ ಕಲ್ಲಿದ್ದಲು ಸಾಗಿಸುತ್ತಿತ್ತು. ಇದೇ ವೇಳೆ ಮತ್ತೊಂದು ರೈಲು ಖಾಲಿಯಾಗಿ ವಾಪಸ್ ಆಗುತ್ತಿತ್ತು ಅನ್ನೋ ಮಾಹಿತಿ ಲಭ್ಯವಾಗಿದೆ.

ಮುಂಭಾಗದ ಬೋಗಿಗಳು ಜಖಂಗೊಂಡಿದ್ದು, ಅವುಗಳಲ್ಲಿ ಮೂವರು ಸಿಲುಕಿದ್ದರು. ಹೀಗಾಗಿ ಪೊಲೀಸರು ಮತ್ತು ಎನ್​​ಟಿಪಿಸಿ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದರು. ಆದ್ರೆ ರೈಲಿನಲ್ಲಿ ಸಿಲುಕಿದ್ದ ಮೂವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಒಂದೇ ಹಳಿಯಲ್ಲಿ ತೆರಳಲು 2 ರೈಲುಗಳಿಗೆ ಅನುಮತಿ ನೀಡಿರೋದೇ ಈ ದುರ್ಘಟನೆಗೆ ಕಾರಣ ಅಂತ ತಿಳಿದುಬಂದಿದೆ.

Contact Us for Advertisement

Leave a Reply