ಸೌತ್​ ಆಫ್ರಿಕಾ ವಿರುದ್ಧ ಭಾರತ ಜಯಭೇರಿ! ಕನ್ನಡಿಗ ರಾಹುಲ್​​ಗೆ ಪಂದ್ಯಶ್ರೇಷ್ಠ ಪ್ರಶಸ್ತಿ

masthmagaa.com:

ದಕ್ಷಿಣ ಆಫ್ರಿಕಾದ ಸೆಂಚೂರಿಯನ್ ನಲ್ಲಿ ನಡೆದ ಮೊದಲ ಟೆಸ್ಟ್ ಮ್ಯಾಚಲ್ಲಿ ಭಾರತ ದಕ್ಷಿಣ ಆಫ್ರಿಕಾವನ್ನ 113 ರನ್ ಗಳಿಂದ ಸೋಲಿಸಿದೆ. 305 ರನ್ ಗಳ ಟಾರ್ಗೆಟ್ ಬೆನ್ನತ್ತಿದ ಸೌಥಾಫ್ರಿಕಾ 191 ರನ್ ಗಳಿಗೆ ಆಲೌಟ್ ಆಯ್ತು. ಕ್ಯಾಪ್ಟನ್ ಡೀನ್ ಎಲ್ಗರ್ 77 ರನ್ ಬಿಟ್ರೆ ಬೇರೆ ಯಾರೂ ನಿಂತು ಆಡಲಿಲ್ಲ. ಭಾರತದ ವೇಗಿಗಳಾದ ಬೂಮ್ರಾ ಹಾಗೂ ಮಹಮದ್ ಶಮಿ ತಲಾ 3 ವಿಕೆಟ್ ಪಡೆದ್ರು. ಮಹಮದ್ ಸಿರಾಜ್ ಹಾಗೂ ರವಿಚಂದ್ರನ್ ಅಶ್ವಿನ್ ತಲಾ ಎದರಡು ವಿಕೆಟ್ ಪಡೆದ್ರು.123 ಹಾಗೂ 23 ರನ್ ಬಾರಿಸಿದ ಕೆಎಲ್ ರಾಹುಲ್ ಪ್ಲೇಯರ್ ಆಫ್ ದಿ ಮ್ಯಾಚ್ ಗೌರವಕ್ಕೆ ಪಾತ್ರರಾದ್ರು. ಮಹಮದ್ ಶಮಿ ಮೊದಲ ಇನ್ನಿಂಗ್ಸಲ್ಲಿ 5 ಹಾಗೂ ಎರಡನೇ ಇನ್ನಿಂಗ್ಸಲ್ಲಿ 3 ವಿಕೆಟ್ ಪಡೆದು ತಂಡಕ್ಕೆ ತಾನು ಎಷ್ಟು ಇಂಪಾರ್ಟೆಂಟ್ ಅನ್ನೋದನ್ನ ಮತ್ತೊಮ್ಮೆ ಸಾಬೀತು ಮಾಡಿದ್ರು. 2ನೇ ಟೆಸ್ಟ್ ಜನವರಿ 3ನೇ ತಾರೀಕು ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆಯುತ್ತೆ. ಇದು ಒಟ್ಟು ಮೂರು ಟೆಸ್ಟ್ ಗಳ ಸರಣಿ. ಈಗ ಭಾರತ 1-0 ಲೀಡ್ ಸಾಧಿಸಿದೆ.

-masthmagaa.com

Contact Us for Advertisement

Leave a Reply