masthmagaa.com:

ಬೆಂಗಳೂರು: ರಾಜ್ಯದಲ್ಲಿ ಇವತ್ತು 204 ಜನರಿಗೆ ಹೊಸದಾಗಿ ಸೋಂಕು ತಗುಲಿದೆ ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 7,734 ಆಗಿದೆ. ಇವತ್ತಿನ 204 ಪ್ರಕರಣಗಳಲ್ಲಿ 108 ಮಂದಿ ಹೊರರಾಜ್ಯ ಹಾಗೂ ಹೊರ ದೇಶಗಳಿಂದ ಬಂದವರಾಗಿದ್ದಾರೆ. ಆಘಾತಕಾರಿ ಅಂದ್ರೆ ಕಳೆದ 24 ಗಂಟೆಗಳಲ್ಲಿ 8 ಜನ ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಮೃತಪಟ್ಟ ಸೋಂಕಿತರ ಸಂಖ್ಯೆ ಶತಕ ದಾಟಿದ್ದು 102 ಆಗಿದೆ.

ರಾಜ್ಯದಲ್ಲಿ ಕಳೆದ 24 ಗಂಟೆಗಲ್ಲಿ 348 ಜನ ಗುಣಮುಖರಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟು 4,804 ಜನ ಗುಣಮುಖರಾದಂತಾಗಿದೆ. 2,824 ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೀತಿದಾರೆ. ಇದರಲ್ಲಿ 72 ಜನ ಗಂಭೀರ ಸ್ಥಿತಿಯಲ್ಲಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಕಳೆದ ಎರಡ್ಮೂರು ದಿನಗಳಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು, ಆ್ಯಕ್ಟಿವ್ ಪ್ರಕರಣಗಳ ಸಂಖ್ಯೆ ಕಮ್ಮಿಯಾಗ್ತಿದೆ ಅನ್ನೋದು ಸಮಾಧಾನದ ವಿಚಾರ.

ಇವತ್ತಿನ ಪ್ರಕರಣಗಳು: 

ಬೆಂಗಳೂರು ನಗರ – 55

ಯಾದಗಿರಿ – 37

ಬಳ್ಳಾರಿ – 29

ಕಲಬುರಗಿ – 19

ಬೀದರ್ – 12

ದಕ್ಷಿಣ ಕನ್ನಡ – 8

ಧಾರವಾಡ – 8

ಮಂಡ್ಯ – 7

ಹಾಸನ – 5

ಉಡುಪಿ -4

ಬಾಗಲಕೋಟೆ – 4

ಶಿವಮೊಗ್ಗ – 4

ದಾವಣಗೆರೆ – 3

ಚಿಕ್ಕಬಳ್ಳಾಪುರ – 3

ಉತ್ತರ ಕನ್ನಡ – 3

ರಾಯಚೂರು -1

ಮೈಸೂರು – 1

ಬೆಂಗಳೂರು ಗ್ರಾಮಾಂತರ -1

ಇವತ್ತು ಮೃತಪಟ್ಟವರು:

ಬೆಂಗಳೂರು ನಗರ – 5 (70 ವರ್ಷದ ವೃದ್ಧೆ, 39 ವರ್ಷದ ಮಹಿಳೆ, 61 ವರ್ಷದ ವೃದ್ಧ, 64 ವರ್ಷದ ವೃದ್ಧ ಮತ್ತು 90 ವರ್ಷದ ವೃದ್ಧ)

ಬಳ್ಳಾರಿ – 1 (62 ವರ್ಷದ ವೃದ್ಧ)

ಬೀದರ್​ – 1 (26 ವರ್ಷದ ಪುರುಷ)

ಶಿವಮೊಗ್ಗ – 1 (56 ವರ್ಷದ ಮಹಿಳೆ)

-masthmagaa.com

Contact Us for Advertisement

Leave a Reply