ಭದ್ರತಾ ಪಡೆಗಳಿಗೆ ಭರ್ಜರಿ ಗೆಲುವು.. 24 ಗಂಟೆಯಲ್ಲಿ 9 ಉಗ್ರರ ಹತ್ಯೆ

masthmagaa.com:

ಜಮ್ಮು-ಕಾಶ್ಮೀರದ ಶೋಪಿಯಾನ್​ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರನ್ನು ಹೊಡೆದುರುಳಿಸಲಾಗಿದೆ. ನಿನ್ನೆಯಷ್ಟೇ ಶೋಪಿಯಾನ್​ ಜಿಲ್ಲೆಯ ರೆಬನ್ ಗ್ರಾಮದಲ್ಲಿ ಹಿಜ್ಬುಲ್​ ಮುಜಾಹಿದ್ದೀನ್ ಸಂಘಟನೆಯ ಐವರು ಉಗ್ರರನ್ನ ಹತ್ಯೆ ಮಾಡಲಾಗಿತ್ತು. ಈ ಮೂಲಕ ಕಳೆದ 24 ಗಂಟೆಗಳಲ್ಲಿ ಒಟ್ಟು 9 ಉಗ್ರರ ಕಥೆ ಮುಗಿಸಿದೆ ಭಾರತೀಯ ಸೇನೆ.

ಇಂದು ಬೆಳಗ್ಗೆ ಶೋಪಿಯಾನ್​ ಜಿಲ್ಲೆಯ ಪಿಂಜೊರಾದಲ್ಲಿ ಉಗ್ರರಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ಮತ್ತು ಭದ್ರತಾ ಪಡೆಗಳು ಕಾರ್ಯಾಚರಣೆಗೆ ಇಳಿದಿವೆ. ಉಗ್ರರಿಗಾಗಿ ಹುಡುಕಾಟ ನಡೆಸುತ್ತಿರುವಾಗ ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆದಿದೆ. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳು ಕೂಡ ಗುಂಡಿನ ಸುರಿಮಳೆಗೈದಿದ್ದಾರೆ. ಈ ವೇಳೆ ನಾಲ್ವರು ಉಗ್ರರನ್ನ ಹತ್ಯೆ ಮಾಡಲಾಗಿದೆ ಅಂತ ಜಮ್ಮು-ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply