ಧ್ಯಾನ್ ಚಂದ್ ಟ್ರೋಫಿ ಆಡಲು ಹೊರಟ 4 ಹಾಕಿ ಆಟಗಾರರ ದುರ್ಮರಣ

ಮಧ್ಯಪ್ರದೇಶ: ಹೊಶಂಗಾಬಾದ್​​ನಲ್ಲಿ ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ರಾಷ್ಟ್ರಮಟ್ಟದ ಹಾಕಿ ಆಟಗಾರರು ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ಧ್ಯಾನ್ ಚಂದ್ ಟ್ರೋಫಿಗಾಗಿ ಆಟವಾಡಲು ತೆರಳುತ್ತಿದ್ದರು ಎಂದು ತಿಳಿದುಬಂದಿದೆ. ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ರಾಯ್​ ಸಲ್ಪುರ್​ ಬಳಿ ಈ ಘಟನೆ ನಡೆದಿದೆ. ಎದುರಿನಿಂದ ಬರುತ್ತಿದ್ದ ವಾಹನಕ್ಕೆ ಡಿಕ್ಕಿ ತಪ್ಪಿಸಲು ಹೋಗಿ ಈ ದುರ್ಘಟನೆ ಸಂಭವಿಸಿದೆ.

ತಮ್ಮ ಸ್ನೇಹಿತರಲ್ಲಿ ಓರ್ವನ ಹುಟ್ಟುಹಬ್ಬವನ್ನು ಆಚರಿಸಿದ ಇಂದು ಮಧ್ಯಪ್ರದೇಶದ ಭೋಪಾಲ್​​ನಲ್ಲಿ ನಡೆಯಲಿದ್ದ, ಧ್ಯಾನ್ ಚಂದ್ ಹಾಕಿ ಪಂದ್ಯಕ್ಕೆ ತೆರಳುತ್ತಿದ್ದರು ಅಂತ ತಿಳಿದುಬಂದಿದೆ. ಮೃತರೆಲ್ಲರೂ 18ರಿಂದ 22 ವರ್ಷದೊಳಗಿನವರಾಗಿದ್ಧಾರೆ. ಮೃತರನ್ನು ಶಹನವಾಜ್​​, ಹುಸೇನ್, ಆದರ್ಶ್​​ ಹರ್ದುವಾ, ಆಶಿಶ್ ಲಾಲ್​​ ಮತ್ತು ಅಂಕಿತ್ ವರುಣ್ ಎಂದು ತಿಳಿದುಬಂದಿದೆ.

ಉಳಿದ ಮೂವರಿಗೆ ಗಂಭೀರ ಗಾಯಗಳಾಗಿದ್ದು ನರ್ಮದ ಅಪ್ನಾ ಆಸ್ಪತ್ರೆಯಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

 

Contact Us for Advertisement

Leave a Reply