ದಾವಣಗೆರೆ, ಭಟ್ಕಳ, ಬೆಳಗಾವಿಯಲ್ಲಿ ಕೊರೋನಾ ಸ್ಪೋಟ..!

masthmagaa.com:

ರಾಜ್ಯದಲ್ಲಿ ಕೊರೋನಾ ಸ್ಫೋಟವಾಗಿದ್ದು, ಒಂದೇ ದಿನ 45 ಪ್ರಕರಣಗಳು ದೃಢಪಟ್ಟಿವೆ. ಅದರಲ್ಲೂ ದಾವಣಗೆರೆ ಜಿಲ್ಲೆಯೊಂದರಲ್ಲೇ 14 ಪ್ರಕರಣಗಳು ಬೆಳಕಿಗೆ ಬಂದಿವೆ. 14 ಜನರಲ್ಲಿ 10 ಮಂದಿ ರೋಗಿ ನಂಬರ್ 533ರ ಸಂಪರ್ಕಕ್ಕೆ ಬಂದವರಾಗಿದ್ದಾರೆ. ರೋಗಿ ನಂಬರ್ 533 ದಾವಣಗೆರೆಯ 35 ವರ್ಷ ವಯಸ್ಸಿನ ಮಹಿಳೆಯಾಗಿದ್ದಾರೆ.

ಇನ್ನು ಉತ್ತರ ಕನ್ನಡದ ಭಟ್ಕಳದಲ್ಲಿ ರೋಗಿ ನಂಬರ್ 659ರ ಸಂಪರ್ಕಕಕ್ಕೆ ಬಂದ 12 ಮಂದಿಯಲ್ಲಿ ಕೊರೋನಾ ವೈರಸ್ ದೃಢಪಟ್ಟಿದೆ. ರೋಗಿ ನಂಬರ್ 659 ಭಟ್ಕಳದ 18 ವರ್ಷದ ಯುವತಿಯಾಗಿದ್ದಾರೆ.

ಇನ್ನು ಬೆಳಗಾವಿಯಲ್ಲಿ 11 ಜನರಿಗೆ, ಬೆಂಗಳೂರು ನಗರದಲ್ಲಿ 7 ಹಾಗೂ ಬಳ್ಳಾರಿಯಲ್ಲಿ ಒಬ್ಬರಿಗೆ ಸೋಂಕು ತಗುಲಿದೆ ಅಂತ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇವತ್ತು ಸೋಂಕು ಪತ್ತೆಯಾದ 45 ಜನರಲ್ಲಿ 10 ವರ್ಷದೊಳಗಿನ 7 ಮಕ್ಕಳಿರೋದು ಆಘಾತಕಾರಿ ವಿಚಾರ.

ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 750ಕ್ಕೆ ಏರಿಕೆಯಾಗಿದೆ. ಇದರಲ್ಲಿ 30 ಜನ ಮೃತಪಟ್ಟಿದ್ದು, 371 ಜನ ಗುಣಮುಖರಾಗಿದ್ದಾರೆ.

-masthmagaa.com

 

Contact Us for Advertisement

Leave a Reply