masthmagaa.com:

ರಾಜ್ಯದಲ್ಲಿ ನಿನ್ನೆ ಸಂಜೆ 5 ಗಂಟೆಯಿಂದ ಇಂದು ಮಧ್ಯಾಹ್ನದವರೆಗೆ 75 ಕೊರೋನಾ ಪ್ರಕರಣಗಳು ದೃಢಪಟ್ಟಿವೆ ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,493ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಕೊರೋನಾಗೆ ಇದುವರೆಗೆ 47 ಮಂದಿ ಬಲಿಯಾಗಿದ್ದಾರೆ. 809 ಮಂದಿ ಗುಣಮುಖರಾಗಿದ್ದು, 1635 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೊಸದಾಗಿ ಪತ್ತೆಯಾದ 75 ಪ್ರಕರಣಗಳಲ್ಲಿ ಬರೋಬ್ಬರಿ 46 ಮಂದಿ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ತಮಿಳುನಾಡಿನಿಂದ 6, ತೆಲಂಗಾಣದಿಂದ 2, ದೆಹಲಿ ಮತ್ತು ಕೇರಳದಿಂದ ತಲಾ ಒಬ್ಬರು ಬಂದಿದ್ದಾರೆ. ಹೊರದೇಶದಿಂದ ಒಬ್ಬರು ಬಂದವರಾಗಿದ್ದಾರೆ. ಹೀಗೆ ಒಟ್ಟು 75 ಜನರಲ್ಲಿ 57 ಮಂದಿ ಸೋಂಕಿತರು ಹೊರ ರಾಜ್ಯ ಮತ್ತು ಹೊರ ದೇಶದಿಂದ ಬಂದವರೇ ಆಗಿರೋದು ಗಮನಾರ್ಹ.

ಇವತ್ತಿನ ಪ್ರಕರಣಗಳು: 

ಉಡುಪಿ – 27

ಹಾಸನ – 13

ಬೆಂಗಳೂರು ನಗರ  – 7

ಯಾದಗಿರಿ – 7

ದಕ್ಷಿಣ ಕನ್ನಡ – 6

ಚಿತ್ರದುರ್ಗ – 6

ಕಲಬುರಗಿ – 3

ಚಿಕ್ಕಮಗಳೂರು – 3

ವಿಜಯಪುರ – 2

ರಾಯಚೂರು – 1

-masthmagaa.com

Contact Us for Advertisement

Leave a Reply