ಕ್ಷಿಪಣಿ ದಾಳಿಯಲ್ಲಿ 80 ಮಂದಿ ಅಮೆರಿಕನ್ ಉಗ್ರರು ಸತ್ತಿದ್ದಾರೆ: ಇರಾನ್

ಇರಾಕ್​​​​​ನಲ್ಲಿರೋ ಅಮೆರಿಕಾ ವಾಯುನೆಲೆಗಳ ಮೇಲೆ ಇರಾನ್ ನಡೆಸಿದ ದಾಳಿಯಲ್ಲಿ 80 ಮಂದಿ ಸಾವನ್ನಪ್ಪಿದ್ದಾರೆ. ಅವರಲ್ಲಿ 20 ಮಂದಿ ಅಮೆರಿಕಾ ಯೋಧರು ಕೂಡ ಸೇರಿದ್ದಾರೆ ಅಂತ ಇರಾನ್  ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೆ ಸಾವನ್ನಪ್ಪಿದ 80 ಮಂದಿಯನ್ನು ಅಮೆರಿಕನ್ ಉಗ್ರರು ಎಂದು ಕರೆದಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಇರಾನ್, ಇದೇ ರೀತಿಯ 100ಕ್ಕೂ ಹೆಚ್ಚು ಟಾರ್ಗೆಟ್​ಗಳನ್ನು ಸಿದ್ಧಪಡಿಸಲಾಗಿದ್ದು, ಅಮೆರಿಕಾ ಏನಾದ್ರು ಕಿತಾಪತಿ ಮಾಡಿದ್ರೆ ಮತ್ತಷ್ಟು ಪರಿಣಾಮವನ್ನು ಎದುರಿಸಬೇಕಾಗುತ್ತೆ ಎಂದು ಎಚ್ಚರಿಸಿದ್ದಾರೆ. ನಿನ್ನೆ ನಡೆದ ದಾಳಿಯಲ್ಲಿ ಅಮೆರಿಕಾಗೆ ಸೇರಿದ ಹೆಲಿಕಾಪ್ಟರ್ ಮತ್ತು ಹಲವು ಯುದ್ಧೋಪಕರಣಗಳು ನಾಶವಾಗಿವೆ ಅಂತ ಇರಾನ್ ಸ್ಪಷ್ಟಪಡಿಸಿದೆ.

ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಡೊನಾಲ್ಡ್​ ಟ್ರಂಪ್​​, ಎಲ್ಲವೂ ಸರಿಯಾಗಿದೆ. ಇರಾಕ್‌ನಲ್ಲಿರುವ ಎರಡು ಮಿಲಿಟರಿ ನೆಲೆಗಳ ಮೇಲೆ ಇರಾನ್‌ ಕ್ಷಿಪಣಿ ಪ್ರಯೋಗ ನಡೆಸಿದೆ. ಸಾವುನೋವುಗಳು ಮತ್ತು ಹಾನಿಗಳ ಬಗ್ಗೆ ಪಶಿಲೀಲನೆ ನಡೆಸಲಾಗುತ್ತಿದೆ. ಈವರೆಗೆ ಎಲ್ಲವೂ ಸರಿಯಾಗಿದ್ದು, ಏನೂ ತೊಂದ್ರೆ ಇಲ್ಲ. ವಿಶ್ವದಲ್ಲೇ ನಮ್ಮಲ್ಲಿ ಅತ್ಯಂತ ಶಕ್ತಿಶಾಲಿ ಮತ್ತು ಸುಸಜ್ಜಿತ ಮಿಲಿಟರಿ ಇದೆ. ಈ ಘಟನೆಯ ಬಗ್ಗೆ ನಾನು ನಾಳೆ ಬೆಳಗ್ಗೆ ಪ್ರತಿಕ್ರಿಯೆ ನೀಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. 

Contact Us for Advertisement

Leave a Reply