ದೇಶದಲ್ಲಿ ಒಂದೇ ದಿನ ಬರೋಬ್ಬರಿ 81,466 ಜನರಿಗೆ ಕೊರೋನಾ!

masthmagaa.com:

ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ 6 ತಿಂಗಳ ಬಳಿಕ ದಾಖಲೆ ಬರೆದಿದೆ. ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 81,466 ಜನರಿಗೆ ಸೋಂಕು ದೃಢಪಟ್ಟಿದೆ. ಇದು ಕಳೆದ ವರ್ಷದ ಅಕ್ಟೋಬರ್ ಬಳಿಕ ದೃಢಪಟ್ಟ ಅತಿ ಹೆಚ್ಚು ಕೇಸ್. ಹಾಗೇ 469 ಸೋಂಕಿತರು ಮೃತಪಟ್ಟಿದ್ದಾರೆ. ಸುಮಾರು 50,000+ ಸೋಂಕಿತರು ಗುಣಮುಖರಾಗಿದ್ದಾರೆ. ಮಹಾರಾಷ್ಟ್ರದಲ್ಲಿ ನಿನ್ನೆ 43,000 ಜನರಿಗೆ ಕೊರೋನಾ ದೃಢಪಟ್ಟಿದೆ. ಅಂದ್ರೆ ದೇಶದಲ್ಲಿ ವರದಿಯಾದ ಪ್ರಕರಣಗಳಲ್ಲಿ ಅರ್ಧಕ್ಕೂ ಹೆಚ್ಚು ಪ್ರಕರಣ ನಮ್ಮ ಪಕ್ಕದ ರಾಜ್ಯದಲ್ಲಿ ದೃಢಪಟ್ಟಿದೆ.

-masthmagaa.com

Contact Us for Advertisement

Leave a Reply