masthmagaa.com:

ಕೊರೋನಾ ವೈರಸ್​ನ ತವರು ಚೀನಾದಲ್ಲಿ 24 ಗಂಟೆಗಳಲ್ಲಿ 99 ಹೊಸ ಪ್ರಕರಣಗಳು ದೃಢಪಟ್ಟಿವೆ ಅಂತ ಚೀನಾದ ಹೆಲ್ತ್​ ಕಮಿಷನ್ ಹೇಳಿದೆ. 99 ಜನರ ಪೈಕಿ 97 ಮಂದಿ ವಿದೇಶದಿಂದ ಬಂದವರಾಗಿದ್ದಾರೆ. ಉಳಿದ ಎರಡು ಪ್ರಕರಣಗಳು ಉತ್ತರ ಚೀನಾದ ಹೆಲಾಂಗ್​ಜಿಯಾಂಗ್​ ಪ್ರಾಂತ್ಯದಲ್ಲಿ ಪತ್ತೆಯಾಗಿದೆ. ಶುಕ್ರವಾರ 46 ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಆ ಸಂಖ್ಯೆ ಈಗ ದುಪ್ಪಟ್ಟಾಗಿರೋದು ಚೀನಾ ಆತಂಕ ಹೆಚ್ಚಿಸಿದೆ.

ಚೀನಾದಲ್ಲಿ ಇದುವರೆಗೆ 82,052 ಜನರಿಗೆ ಸೋಂಕು ತಗುಲಿದ್ದು 3,339 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ 24 ಗಂಟೆಗಳಲ್ಲಿ ಯಾವುದೇ ಸಾವು ವರದಿಯಾಗಿಲ್ಲ. 50 ಮಂದಿ ಗುಣಮುಖರಾಗಿ ಡಿಸ್ಚಾರ್ಜ್​ ಆಗಿದ್ದಾರೆ. ಈ ಮೂಲಕ ಗುಣಮುಖರಾದವರ ಸಂಖ್ಯೆ 77,575ಕ್ಕೆ ಏರಿಕೆಯಾಗಿದೆ.

2019ರ ಡಿಸೆಂಬರ್​ನಲ್ಲಿ ಚೀನಾದ ವುಹಾನ್​ನಲ್ಲಿ ಮೊದಲು ಕಾಣಿಸಿಕೊಂಡ ಕೊರೋನಾ ವೈರಸ್​ಗೆ ಇಡೀ ವಿಶ್ವವೇ ನಲುಗಿ ಹೋಗಿದೆ. ಆದ್ರೆ ಚೀನಾದಲ್ಲಿ ಇದರ ಹಾವಳಿ ತುಸು ಕಡಿಮೆಯಾದ ಹಿನ್ನೆಲೆ ಲಾಕ್​ಡೌನ್​ ತೆರವು ಮಾಡಲಾಗಿದೆ. ಇದೀಗ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಾಗ್ತಿರೋದು ಚೀನಾ ಚಿಂತೆ ಹೆಚ್ಚಿಸಿದೆ.

-masthmagaa.com

Contact Us for Advertisement

Leave a Reply