masthmagaa.com:
ಪುಣೆ: ಕೊರೋನಾ ಸೋಂಕಿತೆ ಗರ್ಭಿಣಿಯೊಬ್ಬರು ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ ಘಟನೆ ಪುಣೆಯ ಆಸ್ಪತ್ರೆಯೊಂದರಲ್ಲಿ ನಡೆದಿದೆ. 25 ವರ್ಷದ ಗರ್ಭಿಣಿಗೆ ಇತ್ತೀಚೆಗಷ್ಟೇ ಕೊರೋನಾ ಸೋಂಕು ತಗುಲಿರೋದು ದೃಢಪಟ್ಟಿತ್ತು. ಅವರನ್ನ ಏಪ್ರಿಲ್ 16ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವತ್ತು ಅವರು ಮುದ್ದಾದ ಮಗುವಿಗೆ ಜನ್ಮ ನೀಡಿದ್ದಾರೆ.
ಮಗುವಿಗೆ ಕೊರೋನಾ ಸೋಂಕು ತಗುಲಿಲ್ಲ ಅಂತ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ. ಆದರೂ ಮಗುವನ್ನ ಪ್ರತ್ಯೇಕ ವಾರ್ಡ್ನಲ್ಲಿಟ್ಟು ನಿಗಾ ವಹಿಸಲಾಗಿದೆ. ತಾಯಿ ಎದೆ ಹಾಲು ಉಣಿಸುವುದರಿಂದ ಮಗುವಿಗೆ ಕೊರೋನಾ ಹರಡುವುದಿಲ್ಲ ಅಂತ ವಿಶ್ವ ಆರೋಗ್ಯ ಸಂಸ್ಥೆಯೇ ಹೇಳಿದೆ. ಹೀಗಾಗಿ ಕೊರೋನಾ ಪೀಡಿತೆ ತಾಯಿ ತನ್ನ ಮಗುವಿಗೆ ಹಾಲುಣಿಸಬಹುದು ಅಂತ ವೈದ್ಯರು ಹೇಳಿದ್ದಾರೆ.
-masthmagaa.com
Contact Us for Advertisement