masthmagaa.com:
ಕೇವಲ 109 ಕೊರೋನಾ ಕೇಸ್ ಮತ್ತು 2 ಸಾವಿನೊಂದಿಗೆ ಕೊರೋನಾವನ್ನ ಬಹುತೇಕ ಕಂಟ್ರೋಲ್ ಮಾಡಿದ್ದ ಪೆಸಿಫಿಕ್ ದ್ವೀಪ ರಾಷ್ಟ್ರವಾದ ಫಿಜಿಯಲ್ಲೀಗ ಭಾರತದ ರೂಪಾಂತರಿ ವೈರಾಣು ಪತ್ತೆಯಾಗಿದೆ. ಕ್ವಾರಂಟೈನ್ ಕೇಂದ್ರದಲ್ಲಿದ್ದ 6 ಜನರಲ್ಲಿ ಭಾರತದ ರೂಪಾಂತರಿ ವೈರಾಣು ಕಾಣಿಸಿಕೊಂಡಿದೆ. ಇದರ ಬೆನ್ನಲ್ಲೇ ಅಲರ್ಟ್ ಆಗಿರೋ ಅಲ್ಲಿನ ಸರ್ಕಾರ, ಭಾರತ, ಬ್ರೆಜಿಲ್, ದಕ್ಷಿಣ ಆಫ್ರಿಕಾ ಮತ್ತು ಬ್ರಿಟನ್ನಲ್ಲಿನ ಕೊರೋನಾ ಸುನಾಮಿ ಪರಿಸ್ಥಿತಿ ತನ್ನ ದೇಶದಲ್ಲಿ ಸೃಷ್ಟಿಯಾಗದಂತೆ ತಡೆಯಲು ಫಿಜಿ ರಾಜಧಾನಿ ಸುವಾದಲ್ಲಿ 14 ದಿನಗಳ ಲಾಕ್ಡೌನ್ ಘೋಷಿಸಿದೆ.
-masthmagaa.com
Contact Us for Advertisement