ಬೆಂಗಳೂರಿಗೂ ಬಂತು ಕೊರೋನಾ.. ಅಮೆರಿಕದಿಂದ ಬಂದಿದ್ದ ಟೆಕ್ಕಿಗೆ ಸೋಂಕು

masthmagaa.com:

ರಾಜ್ಯದಲ್ಲಿ ಮೊದಲ ಕೊರೋನಾ ಪ್ರಕರಣ ದೃಢಪಟ್ಟಿದ್ದು, ಅಮೆರಿಕದಿಂದ ಬೆಂಗಳೂರಿಗೆ ಬಂದ ವ್ಯಕ್ತಿಯಲ್ಲಿ ವೈರಸ್‌ ಪತ್ತೆಯಾಗಿದೆ ಅಂತ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಖಚಿತಪಡಿಸಿದ್ದಾರೆ.

ಮಾರ್ಚ್​ 1ರಂದು ಬೆಳಗ್ಗೆ 8.30ಕ್ಕೆ ಬೆಂಗಳೂರಿಗೆ ಆಗಸಿದ್ದ 40 ವರ್ಷದ ಟೆಕ್ಕಿಯಲ್ಲಿ ಕೊರೋನಾ ವೈರಸ್‌ ಪತ್ತೆಯಾಗಿದೆ. ಸೋಂಕಿತನನ್ನು ಪ್ರತ್ಯೇಕವಾಗಿರಿಸಿ ರಾಜೀವ್‌ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆತನ ಪತ್ನಿ, ಮಗು ಹಾಗೂ ಆತನ ಜೊತೆ ಪ್ರಯಾಣ ಬೆಳೆಸಿದ ವ್ಯಕ್ತಿಯನ್ನು ನಿಗಾದಲ್ಲಿ ಇಡಲಾಗಿದೆ. ಬೆಂಗಳೂರಿನ ಕೇಸ್​ ಸೇರಿ ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 44ಕ್ಕೆ ಏರಿಕೆಯಾಗಿದೆ.

ಇನ್ನು ಕೊರೋನಾ ವೈರಸ್ ದೃಢಪಟ್ಟ ಟೆಕ್ಕಿ ಜೊತೆ 2,666 ಜನ ಸಂಪರ್ಕಕ್ಕೆ ಬಂದಿರುವ ಸಾಧ್ಯತೆ ಇದೆ ಅಂತ ಡಾ.ಕೆ. ಸುಧಾಕರ್ ಹೇಳಿದ್ದಾರೆ. ಅಮೆರಿಕದಿಂದ ವಿಮಾನದಲ್ಲಿ ಪ್ರಯಾಣ ಬೆಳೆಸಿದ ಈತ ದುಬೈ ಮೂಲಕ ಭಾರತಕ್ಕೆ ಬಂದಿದ್ದಾನೆ. ಈತನ ಸಂಪರ್ಕಕ್ಕೆ ಬಂದಿರುವ ಎಲ್ಲರನ್ನು ಪತ್ತೆ ಹಚ್ಚುವ ಕೆಲಸ ನಡೀತಿದೆ ಎಂದಿದ್ದಾರೆ.

-masthmagaa.com

Contact Us for Advertisement

Leave a Reply