ಕ್ವಾಡ್​ ರಾಷ್ಟ್ರಗಳ ಸಭೆಗೆ ಚೀನಾ ಕೆಂಡಾಮಂಡಲ!

masthmagaa.com:

ಮುಂದಿನ ವಾರ ಕ್ವಾಡ್ ರಾಷ್ಟ್ರಗಳಾದ ಭಾರತ, ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್ ನಾಯಕರು ಒಟ್ಟಾಗಿ ಸಭೆ ನಡೆಸ್ತಿರೋದಕ್ಕೆ ಚೀನಾ ಉರಿದುರಿದು ಬಿದ್ದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಚೀನಾ ವಿದೇಶಾಂಗ ಇಲಾಖೆ ವಕ್ತಾರ ಝಾವೋ ಲಿಜಿಯಾನ್​​​, ಈ ರೀತಿ ಗುಂಪುಗಳನ್ನ ಕಟ್ಕೊಂಡು ಬೇರೆ ದೇಶಗಳನ್ನು ಟಾರ್ಗೆಟ್ ಮಾಡೋದು ಏನೂ ಸಾಧಿಸಲು ಸಾಧ್ಯವಿಲ್ಲ.. ಇದಕ್ಕೆ ಭವಿಷ್ಯವೂ ಇಲ್ಲ ಅಂತ ಗುಡುಗಿದ್ದಾರೆ. ದೇಶಗಳ ನಡುವಿನ ಸಹಕಾರ ಮೂರನೇ ಮತ್ತೊಂದು ದೇಶವನ್ನು ಟಾರ್ಗೆಟ್ ಮಾಡುವಂತಿರಬಾರದು. ಅವರ ಹಿತಾಸಕ್ತಿಗಳಿಗೆ ಧಕ್ಕೆ ತರುವಂತಿರಬಾರದು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply