ಕೊರೋನಾ ಭೀತಿ: 1 ತಿಂಗಳು ನ್ಯೂಜಿಲೆಂಡ್ ಲಾಕ್​ಡೌನ್​​..!

-masthmagaa.com:

ನ್ಯೂಜಿಲೆಂಡ್​​: ಕೊರೋನಾ ವೈರಸ್​​ನಿಂದಾಗಿ ಇಡೀ ವಿಶ್ವವೇ ತಲ್ಲಣಗೊಂಡಿದೆ. ಹೀಗಾಗಿ ನ್ಯೂಜಿಲೆಂಡ್​ನಲ್ಲೂ ಒಂದು ತಿಂಗಳ ಕಾಲ ಲಾಕ್​ಡೌನ್ ಹೇರಲಾಗಿದೆ. ಇಂದು ಮಧ್ಯರಾತ್ರಿಯಿಂದ ಈ ಲಾಕ್​ಡೌನ್ ಜಾರಿಗೆ ಬರಲಿದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಇಡೀ ದೇಶವೇ ಲಾಕ್​ಡೌನ್ ಆಗಲಿದೆ ಎಂದು ಪ್ರಧಾನಿ ಜಸಿಂಡಾ ಆರ್ಡರ್ನ್ ಆದೇಶಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ಕೊರೋನಾ ವೈರಸ್​ ಚೈನ್ ತುಂಡರಿಸಲು ಒಂದು ತಿಂಗಳ ಕಾಲ ದೇಶವನ್ನು ಲಾಕ್​ಡೌನ್ ಮಾಡಲಾಗುತ್ತಿದೆ. ಯಾವುದೇ ತಪ್ಪು ಮಾಡಬೇಡಿ.. ಇದ್ರಿಂದ ಪರಿಸ್ಥಿತಿ ಸುಧಾರಿಸುವ  ಬದಲು ಮತ್ತಷ್ಟು ಕೆಟ್ಟದಾಗುತ್ತದೆ.  ಕೊರೋನಾ ತಡೆಯೋದು ಮತ್ತಷ್ಟು ವಿಳಂಬವಾಗುತ್ತೆ ಅಂತ ಹೇಳಿದ್ದಾರೆ.  ಒಂದು ವೇಳೆ ಯಾರಿಗಾದರೂ ಲಾಕ್​ಡೌನ್ ಪಾಲಿಸಲು ಸಾಧ್ಯವಾಗದೇ ಇದ್ದರೆ, ನಿಮಗೇ ಕೊರೋನಾ ವೈರಸ್ ಬಂದಿದೆ ಎಂದು ಭಾವಿಸಿಕೊಳ್ಳಿ.. ಇತರರಿಂದ ದೂರವಿರಿ ಎಂದು ಸಲಹೆ ಕೂಡ ಕೊಟ್ಟಿದ್ದಾರೆ.

ನ್ಯೂಜಿಲೆಂಡ್​ನಲ್ಲಿ ಈವರೆಗೆ 205 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.  ಆದ್ರೆ ಕಳೆದೊಂದು ದಿನದಲ್ಲಿ 50 ಪ್ರಕರಣಗಳು ಬೆಳಕಿಗೆ ಬಂದಿರೋದ್ರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

-masthmagaa.com

Contact Us for Advertisement

Leave a Reply