ಅಫ್ಘಾನಿಸ್ತಾನದಲ್ಲಿ ಅಮೆರಿಕ ಮಾಡಿದ್ದು ಸರಿಯಲ್ಲ: ಪೋಪ್ ಫ್ರಾನ್ಸಿಸ್

masthmagaa.com:

ಪೋಪ್​ ಫ್ರಾನ್ಸಿಸ್ ಅಫ್ಘಾನಿಸ್ತಾನ ವಿಚಾರಕ್ಕೆ ಸಂಬಂಧಿಸಿದಂತೆ ಒಂದು ಅತ್ಯಂತ ಗಂಭೀರ ಹೇಳಿಕೆ ನೀಡಿದ್ಧಾರೆ. ಅಮೆರಿಕ ಮತ್ತು ಅದರ ಮಿತ್ರ ಪಾಶ್ಚಿಮಾತ್ಯ ದೇಶಗಳು ಅಫ್ಘಾನಿಸ್ತಾನದಲ್ಲಿ ತಮಗಿಷ್ಟ ಬಂದ ಮಾದರಿಯ ಪ್ರಜಾಪ್ರಭುತ್ವ ಸರ್ಕಾರ ಸ್ಥಾಪಿಸಲು ಪ್ರಯತ್ನ ಪಟ್ಟಿದ್ದನ್ನು ಪೋಪ್​ ಫ್ರಾನ್ಸಿಸ್ ಟೀಕಿಸಿದ್ದಾರೆ. ಹೊರಗಿನವರು ಅಫ್ಘಾನಿಸ್ತಾನಕ್ಕೆ ಹೋಗಿ ತಮ್ಮ ದೃಷ್ಟಿಕೋನಕ್ಕೆ ಸರಿ ಎನಿಸಿದ ಸರ್ಕಾರ ವ್ಯವಸ್ಥೆಯನ್ನು ಅಲ್ಲಿ ಸ್ಥಾಪಿಸಲು ಪ್ರಯತ್ನ ಪಟ್ಟರು ಆದ್ರೆ, ಹೀಗೆ ಮಾಡುವಾಗ ಅಫ್ಘಾನಿಸ್ತಾನದ ಸಂಸ್ಕೃತಿ, ಇತಿಹಾಸ, ಅಲ್ಲಿನ ಬುಡಕಟ್ಟುಗಳು ಮತ್ತು ಅವರ ಯೋಚಿಸೋ ರೀತಿ ಬಗ್ಗೆ ಅಧ್ಯಯನ ಮಾಡಲಿಲ್ಲ ಅಂತ ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ. ಜೊತೆಗೆ ಜಗತ್ತಿನಲ್ಲಿರೋ ಜಗತ್ತಿನ ಎಲ್ಲಾ ಕ್ರೈಸ್ತರು ಅಫ್ಘಾನಿಸ್ತಾನದ ಪರಿಸ್ಥಿತಿಗೆ ಸಂಬಂಧಿಸಿದಂತೆ ಪ್ರಾರ್ಥನೆ ಮಾಡಿ ಅಂತ ಕೂಡ ಕರೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply