masthmagaa.com:

6ನೇ ವೇತನ ಆಯೋಗದ ಶಿಫಾರಸು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೆಹಲಿ ಏಮ್ಸ್ ನರ್ಸ್​ಗಳ ಒಕ್ಕೂಟ ನಡೆಸುತ್ತಿರುವ ಮುಷ್ಕರಕ್ಕೆ ಮುಂದುವರಿದಿದೆ. ದೆಹಲಿಯಲ್ಲಿ ನರ್ಸ್​ಗಳು ಧರಣಿಗೆ ಕೂತು ಘೋಷಣೆಗಳನ್ನ ಕೂಗಿದ್ದಾರೆ. ಇದರಿಂದ ಏಮ್ಸ್​ ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳ ಸೇವೆಯಲ್ಲಿ ವ್ಯತ್ಯಯವಾಗಿದ್ದು ರೋಗಿಗಳ ಸಂಬಂಧಿಕರು ಸಮಸ್ಯೆ ಆಗ್ತಿದೆ ಅಂತ ಅಳಲು ತೋಡಿಕೊಂಡಿದ್ದಾರೆ. ಆದ್ರೆ ನಮ್ಮ ಬೇಡಿಕೆಗಳನ್ನ ಈಡೇರಿಸದೇ ಇರೋದ್ರಿಂದ ನಾವು ಕೂಡ ಅಸಾಯಕ ಸ್ಥಿತಿಯಲ್ಲಿದ್ದೇವೆ. ಮುಷ್ಕರ ನಡೆಸೋದಾಗಿ ಒಂದು ತಿಂಗಳ ಹಿಂದೆಯೇ ನೋಟಿಸ್​ ಕೊಟ್ಟಿದ್ವಿ. ಆದ್ರೆ ನಮ್ಮ ಮಾತುಗಳನ್ನ ಯಾರೂ ಕೇಳಲಿಲ್ಲ. ಈಗಲೂ ನಾವು ಮಾತುಕತೆಗೆ ಸಿದ್ಧರಿದ್ದೇವೆ ಅಂತ ಏಮ್ಸ್​ ನರ್ಸ್​ ಒಕ್ಕೂಟ ಹೇಳಿದೆ. ಈ ಮುಷ್ಕರಕ್ಕೆ ದೆಹಲಿ ನರ್ಸ್​ ಫೆಡರೇಷನ್​ ಕೂಡ ಬೆಂಬಲ ಸೂಚಿಸಿದೆ.

ಮತ್ತೊಂದುಕಡೆ ಕೊರೋನಾಗೆ ಲಸಿಕೆ ಸಿಗಲು ಕೆಲವೇ ದಿನಗಳು ಬಾಕಿ ಇರುವಾಗಲೇ ಹೀಗೆ ಮಾಡ್ಬೇಡ, ಕರ್ತವ್ಯಕ್ಕೆ ವಾಪಸ್​ ಬನ್ನಿ ಅಂತ ಏಮ್ಸ್​ ನಿರ್ದೇಶಕ ರಣದೀಪ್ ಗುಲೇರಿಯಾ ಮನವಿ ಮಾಡಿಕೊಂಡ್ರೂ ಯಾರೂ ಕೇಳ್ತಿಲ್ಲ. ಹೀಗಾಗಿ ಈಗ ಹೊರಗುತ್ತಿಗೆ ಮೂಲಕ ತಾತ್ಕಾಲಿಕವಾಗಿ ನರ್ಸ್​ಗಳನ್ನ ನೇಮಿಸಿಕೊಳ್ಳಲು ಏಮ್ಸ್​ ಮುಂದಾಗಿದೆ. ಅವರಿಗೆ 28,000 ರೂಪಾಯಿ ವೇತನ ನೀಡೋದಾಗಿಯೂ ಜಾಹೀರಾತು ನೀಡಿದೆ.

-masthmagaa.com

Contact Us for Advertisement

Leave a Reply