ಚೀನಾ-ಅಮೆರಿಕ ‘ಕೊರೋನಾ’ ಯುದ್ಧಕ್ಕೆ ತುಪ್ಪ ಸುರಿದ ಡೊನಾಲ್ಡ್ ಟ್ರಂಪ್..!

masthmagaa.com:

ಕೊರೋನಾ ವೈರಸ್​ಗೆ ವಿಶ್ವದ ಎಲ್ಲಾ ರಾಷ್ಟ್ರಗಳು ನಲುಗಿ ಹೋಗಿದ್ದರೆ, ಅಮರಿಕ ಹಾಗೂ ಚೀನಾ ನಡುವಿನ ‘ಕೊರೋನಾ’ ಯುದ್ಧ ಮಾತ್ರ ನಿಂತಿಲ್ಲ. ಕೊರೋನಾ ವೈರಸ್​ ಅನ್ನ ಅಮೆರಿಕ ‘ಚೀನಾ ವೈರಸ್’ ಅಥವಾ ‘ಚೀನಾ ಕಾಯಿಲೆ’ ಅಂತ ಕರೆದರೆ.. ಕೊರೋನಾ ವೈರಸ್ ಬಂದಿದ್ದು ಅಮೆರಿಕ ಯೋಧರಿಂದ ಅಂತ ಇತ್ತೀಚೆಗಷ್ಟೇ ಚೀನಾದ ಅಧಿಕಾರಿಯೊಬ್ಬರು ಹೇಳಿದ್ದರು. ಕೊರೋನಾ ವೈರಸ್​ ಹುಟ್ಟಿನ ಕುರಿತು ಅಮೆರಿಕ-ಚೀನಾ ನಡುವೆ ಕಿತ್ತಾಟ ನಡೆಯುತ್ತಿರುವಾಗಲೇ ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದನ್ನ ‘ಚೈನಿಸ್​ ವೈರಸ್​’ ಅಂತ ಕರೆದಿದ್ದಾರೆ. ಈ ಮೂಲಕ ಉರಿಯೋ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಿದ್ದಾರೆ.

ಕಳೆದ ಡಿಸೆಂಬರ್​ನಲ್ಲಿ ಚೀನಾದ ವುಹಾನ್​ನಲ್ಲಿ ಕಾಣಿಸಿಕೊಂಡಿದ್ದ ಕೊರೋನಾ ವೈರಸ್​ ಸದ್ಯ 148ಕ್ಕೂ ಹೆಚ್ಚು ದೇಶಗಳಿಗೆ ವ್ಯಾಪಿಸಿದೆ. ಇದುವರೆಗೆ 1,70,000ಕ್ಕು ಹೆಚ್ಚು ಜನರಲ್ಲಿ ಸೋಂಕು ದೃಢಪಟ್ಟಿದ್ದು, 6,600ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಅಂತ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

-masthmagaa.com

Contact Us for Advertisement

Leave a Reply