ಮುಸ್ಲಿಂ ಮಹಿಳೆಯರಂದ್ರೆ ಮೋದಿಗೆ ಭಯ ಯಾಕೆ..?-ಓವೈಸಿ ಸವಾಲ್

ದೆಹಲಿ: ಶಹೀನ್​ಭಾಗ್​ ಮತ್ತು ಇತರೆ ಜಾಗಗಳಲ್ಲಿ ನಡೆದ ಸಿಎಎ ಪ್ರತಿಭಟನೆಗೆ ಪ್ರಧಾನಿ ನರೇಂದ್ರ ಮೋದಿ ವಿರೋಧ ವ್ಯಕ್ತಪಡಿಸಿದ್ದಕ್ಕೆ ಅಸಾದುದ್ದೀನ್ ಓವೈಸಿ ತಿರುಗೇಟು ಕೊಟ್ಟಿದ್ದಾರೆ. ಸಂಸತ್​​ನಲ್ಲಿ ಮಾತನಾಡಿದ ಎಐಎಂಐಎಂ ಪಕ್ಷದ ಮುಖ್ಯಸ್ಥ ಓವೈಸಿ, ಪ್ರಧಾನಿ ಮೋದಿಯವರು ಮುಸ್ಲಿಂ ಮಹಿಳೆಯರನ್ನು ತನ್ನ ಸಹೋದರಿಯರು ಎಂದು ಹೇಳಿಕೊಳ್ಳುತ್ತಾರೆ. ಮತ್ಯಾಕೆ ಈಗ ಆ ಮಹಿಳೆಯರಿಗೆ  ಹೆದರುತ್ತಿದ್ದಾರೆ ಅಂತ ಪ್ರಶ್ನಿಸಿದ್ದಾರೆ.

ಮುಂದುವರಿದು ಮಾತನಾಡಿದ ಅವರು, ಎನ್​ಪಿಆರ್ ಮತ್ತು ಎನ್​ಸಿಆರ್​ ಒಂದಕ್ಕೊಂದು ಲಿಂಕ್ ಹೊಂದಿಲ್ಲ. ದೇಶಾದ್ಯಂತ ಎನ್​ಆರ್​ಸಿ ಜಾರಿಯಾಗೋದಿಲ್ಲ ಅನ್ನೋದನ್ನ ಪ್ರಧಾನಿ ಮೋದಿಯವರು ಸ್ಪಷ್ಟಪಡಿಸಬೇಕು ಅಂತ ಪಟ್ಟು ಹಿಡಿದ್ರು. ಅಲ್ಲದೆ ಇದೇ ಮೊದಲ ಬಾರಿಗೆ ದೇಶದ ಸಂಸತ್​​ನಲ್ಲಿ ಒಂದು ಧರ್ಮಕ್ಕೆ ಸಂಬಂಧಿಸಿದಂತೆ ಮಸೂದೆ ಪಾಸ್ ಆಗಿದೆ. ದೇಶದಲ್ಲಿರೋ ಪರಿಸ್ಥಿತಿಯಲ್ಲಿ ನಾವು ನಮ್ಮ ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದೇವೆ. ಆದ್ರೆ ಅದರಲ್ಲಿ ವಿಫಲರಾದರೆ ನಾವು ನಾಶವಾಗುತ್ತೇವೆ. ಜರ್ಮನಿಯಲ್ಲಿ 1933ರಲ್ಲಿ ಯಾವ ರೀತಿಯ ವಾತಾವರಣ ಇತ್ತೋ ಅದೇ ರೀತಿಯ ವಾತಾವರಣ ಈಗ ದೇಶದಲ್ಲಿದೆ. ಬಿಜೆಪಿ ಭಾರತವನ್ನು ಹಿಟ್ಲರ್​​ನ ಜರ್ಮನಿಯನ್ನಾಗಿ ಮಾಡಲು ಯತ್ನಿಸುತ್ತಿದೆ ಅಂತ ಹೇಳಿದ್ಧಾರೆ.

Contact Us for Advertisement

Leave a Reply