ಭಾರತ- ಆಸ್ಟ್ರೇಲಿಯಾ ವರ್ಚುವಲ್ ಸಭೆಯಲ್ಲಿ ಏನಾಯ್ತು?

masthmagaa.com:

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇವತ್ತು ವರ್ಚುವಲ್ ಮೀಟಿಂಗ್ ನಡೆದಿದೆ. ಇದ್ರಲ್ಲಿ ಫ್ರಧಾನಿ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಭಾಗಿಯಾಗಿದ್ರು. ಈ ಬಗ್ಗೆ ಮಾಹಿತಿ ನೀಡಿರೋ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ದನ್ ಶ್ರಿಂಗ್ಲಾ, ಉಭಯದೇಶಗಳು ವಾರ್ಷಿಕ ಶೃಂಗಸಭೆಯನ್ನು ಹಮ್ಮಿಕೊಳ್ಳಲು ನಿರ್ಧರಿಸಿವೆ. ಈ ಮೂಲಕ ಭಾರತದೊಂದಿಗೆ ಸಾಂಸ್ಥಿಕವಾದ ವಾರ್ಷಿಕ ಶೃಂಗಸಭೆ ಹಮ್ಮಿಕೊಳ್ತಿರುವ ಮೂರನೇ ದೇಶ ಆಸ್ತ್ರೇಲಿಯಾ ಆಗಿದೆ ಅಂತ ಹೇಳಿದ್ರು. ಜೊತೆಗೆ ಪ್ರಸಾರ ಭಾರತಿ ಮತ್ತು ಸ್ಪೆಷಲ್ ಬ್ರಾಡ್​​ಕಾಸ್ಟಿಂಗ್ ಸರ್ವೀಸ್​ ಆಫ್ ಆಸ್ಟ್ರೇಲಿಯಾ ನಡುವೆ ಮೆಮೊರಂಡಮ್ ಆಫ್ ಅಂಡರ್​ಸ್ಟಾಂಡಿಂಗ್​​ಗೆ ಸಹಿ ಹಾಕಲಾಗಿದೆ. ಇದ್ರಡಿಯಲ್ಲಿ ಪರಪಸ್ಪರ ಪ್ರೋಗ್ರಾಂಗಳನ್ನು ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗುತ್ತೆ ಅಂತ ಶ್ರಿಂಗ್ಲಾ ಹೇಳಿದ್ದಾರೆ. ಜೊತೆಗೆ ಯುಕ್ರೇನ್ ಮತ್ತು ರಷ್ಯಾ ಸಂಘರ್ಷದಲ್ಲಿ ಭಾರತದ ನಿಲುವು ನಮಗೆ ಅರ್ಥವಾಗುತ್ತೆ.. ಆದ್ರೆ ಯುಕ್ರೇನ್​​ನಲ್ಲಿನ ಮಾರಣಹೋಮಕ್ಕೆ ರಷ್ಯಾವನ್ನೇ ಜವಾಬ್ದಾರರನ್ನಾಗಿ ಮಾಡ್ಬೇಕು ಅಂತ ಸ್ಕಾಟ್ ಮಾರಿಸನ್ ಒತ್ತಾಯಿಸಿದ್ದಾರೆ ಅಂತ ಕೂಡ ತಿಳಿಸಿದ್ರು. ಇನ್ನು ಭಾರತದ ವಿದೇಶಾಂಗ ನೀತಿಯನ್ನು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೊಗಳಿದ್ದಾರಲ್ಲಾ ಅಂತ ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಭಾರತದ ವಿದೇಶಾಂಗ ನೀತಿ ಕುರಿತು ದಾಖಲೆಗಳೇ ಹೇಳುತ್ತವೆ. ನಮ್ಮ ವಿದೇಶಾಂಗ ನೀತಿಗೆ ಎಲ್ಲಾ ಕಡೆಯಿಂದ ಹೊಗಳಿಕೆ ಬರುತ್ತೆ. ಅದ್ರಲ್ಲಿ ಒಬ್ಬರ ಹೊಗಳಿಕೆಯನ್ನು ಮಾತ್ರ ಹೇಳೋದು ಸರಿಯಲ್ಲ ಅಂತ ಹೇಳಿದ್ರು.

-masthmagaa.com

Contact Us for Advertisement

Leave a Reply