3 ದಿನಗಳಲ್ಲಿ ಅಯೋಧ್ಯೆ ವಿಚಾರಣೆ ಅಂತ್ಯ..! ತೀರ್ಪು ಯಾವಾಗ ಗೊತ್ತಾ..?

ಸುಪ್ರೀಂಕೋಟ್​ರ್ನನಲ್ಲಿ ಇನ್ನು ಕೆಲವೇ ದಿನಗಳಲ್ಲಿ ಅಯೋಧ್ಯೆ ವಿವಾದದ ವಿಚಾರಣೆ ಮುಗಿಯಲಿದೆ. ರಂಜನ್ ಗೊಗೊಯ್ ನೇತೃತ್ವದಲ್ಲಿ ಕಳೆದ 35 ದಿನಗಳಿಂದ ಪ್ರತಿದಿನವೂ ಅಯೋಧ್ಯೆ ವಿಚಾರಣೆ ನಡೆಯುತ್ತಿದೆ. ಅಲ್ಲದೆ ಇದೇ ಅಕ್ಟೋಬರ್ 17ರಂದು ವಿಚಾರಣೆ ಮುಗಿಯಬೇಕು. ಎರಡೂ ಸಮುದಾಯದವರು ವಾದ ಪ್ರತಿವಾದ ಮುಗಿಸಬೇಕು ಎಂದು ಸುಪ್ರೀಂಕೋರ್ಟ್​​​ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ಡೆಡ್​ಲೈನ್ ಕೊಟ್ಟಿದ್ದರು. ಅದರನ್ವಯ ಇನ್ನು 3 ದಿನಗಳಲ್ಲಿ ವಿಚಾರಣೆ ನಡೆಯಲಿದೆ.

ಈ ಮೊದಲು ನ್ಯಾ. ರಂಜನ್ ಗೊಗೊಯ್ ಅಕ್ಟೋಬರ್ 18ರ ಡೆಡ್​​ಲೈನ್ ಕೊಟ್ಟಿದ್ದರು. ಆದ್ರೆ ನವೆಂಬರ್ 17ರಂದು ಅವರು ನಿವೃತ್ತಿ ಹೊಂದಲಿರುವ ಹಿನ್ನೆಲೆಯಲ್ಲಿ ಒಂದು ದಿನ ಮೊದಲು ಅಂದ್ರೆ ಅಕ್ಟೋಬರ್ 17ರಂದು ವಿಚಾರಣೆ ಮುಗಿಸಿ, ಆಗ ತೀರ್ಪು ಬರೆಯಲು ಒಂದು ತಿಂಗಳ ಕಾಲ ಸಮಯ ಸಿಗುತ್ತೆ ಎಂದು ಹೇಳಿದ್ದರು.

ಇನ್ನು ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಡಿಸೆಂಬರ್ 10ರವರೆಗೆ ಸೆಕ್ಷನ್ 144 ಹೇರಲಾಗಿದೆ. ಜೊತೆಗೆ ದೀಪೋತ್ಸವ, ಕಾರ್ತಿಕ ಮೇಳದ ಸಂದರ್ಭದಲ್ಲೂ ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿಯಲ್ಲಿ ಇರಲಿದೆ.

Contact Us for Advertisement

Leave a Reply