ಹೋಳಿ ಹಬ್ಬಕ್ಕೆ 2 ದಿನ ರಜೆ ಘೋಷಿಸಿದ ಪಾಕ್​​ನ ಬಲೂಚಿಸ್ತಾನ..!

masthmagaa.com:

ಪಾಕಿಸ್ತಾನ: ಇವತ್ತು ಹೋಳಿ ಹಬ್ಬ.. ಭಾರತೀಯರಿಗೆ ಇದು ದೊಡ್ಡ ಹಬ್ಬ.. ಆದ್ರೆ ಪಾಕಿಸ್ತಾನದ ಬಲೂಚಿಸ್ತಾನದಲ್ಲೂ ಹೋಳಿ ಹಬ್ಬಕ್ಕೆ 2 ದಿನ ರಜೆ ಘೋಷಿಸಲಾಗಿದೆ. ಪ್ರತಿವರ್ಷವೂ ಇಲ್ಲಿನ ಅಲ್ಪಸಂಖ್ಯಾತ ಹಿಂದೂಗಳು ಹೋಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಭಾನುವಾರ ಅಧಿಸೂಚನೆ ಹೊರಡಿರುವ ಇಲ್ಲಿನ ಸಿಎಂ ಜಾಮ್ ಕಮಾಲ್ ಖಾನ್​, ಮಾರ್ಚ್​​ 9 ಮತ್ತು 10ರಂದು ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಸರ್ಕಾರಿ ರಜೆ ಘೋಷಿಸಿದ್ದಾರೆ. ಬಳಿಕ ಹಿಂದೂ ಸಮುದಾಯದವರಿಗೆ ಹೋಳಿ ಹಬ್ಬದ ಶುಭಾಶಯ  ಕೋರಿದ್ದಾರೆ.

2016ರಲ್ಲಿ ಸಿಂಧ್ ಪ್ರಾಂತ್ಯದ ಸರ್ಕಾರ ಮೊದಲ ಬಾರಿಗೆ ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಸರ್ಕಾರಿ ರಜೆ ಘೋಷಿಸಿತ್ತು. ಪಾಕಿಸ್ತಾನದ 20 ಕೋಟಿ ಜನಸಂಖ್ಯೆಯಲ್ಲಿ ಹಿಂದೂಗಳು ಕೇವಲ ಶೇ.2ರಷ್ಟು ಇದ್ದಾರೆ. ಇವರಲ್ಲಿ ಹೆಚ್ಚಿನ ಜನ ಸಿಂಧ್ ಪ್ರಾಂತ್ಯದಲ್ಲಿದ್ದಾರೆ.

-masthmagaa.com

 

Contact Us for Advertisement

Leave a Reply