masthmagaa.com:

ರಷ್ಯಾ ಬಳಿಕ ಇದೀಗ ಬೆಲಾರಸ್​ನಲ್ಲಿ ‘ಸ್ಪುಟ್ನಿಕ್ V’ ಲಸಿಕೆಯ ಅಭಿಯಾನ ಶುರುವಾಗಿದೆ. ಲಸಿಕೆಯ ಅಭಿಯಾನ ಅಂದ್ರೆ ತನ್ನ ದೇಶದ ಜನರಿಗೆ ಸಾಮೂಹಿಕವಾಗಿ ಲಸಿಕೆ ಹಾಕುವ ಕಾರ್ಯಕ್ರಮ. ಈ ಮೂಲಕ ರಷ್ಯಾ ಬಳಿಕ ‘ಸ್ಪುಟ್ನಿಕ್ V’ ಲಸಿಕೆಯ ಅಭಿಯಾನ ಆರಂಭಿಸಿದ ಜಗತ್ತಿನ 2ನೇ ದೇಶ ಎನಿಸಿಕೊಂಡಿದೆ ಬೆಲಾರಸ್. ಯುರೋಪಿನ ರಾಷ್ಟ್ರವಾದ ಬೆಲಾರಸ್ ಪೂರ್ವ ಭಾಗದಲ್ಲಿ ರಷ್ಯಾ ಜೊತೆ ಗಡಿ ಹಂಚಿಕೊಂಡಿದೆ. ಬೆಲಾರಸ್​ ರಷ್ಯಾದ ಮಿತ್ರ ರಾಷ್ಟ್ರ. ರಷ್ಯಾ ಜೊತೆ ರಾಜಕೀಯ ಮತ್ತು ಆರ್ಥಿಕವಾಗಿ​ ಉತ್ತಮ ಸಂಬಂಧ ಹೊಂದಿದೆ. ಹೀಗಾಗಿಯೇ ರಷ್ಯನ್ ಡೈರೆಕ್ಟ್ ಇನ್ವೆಸ್ಟ್​ಮೆಂಟ್ ಫಂಡ್ (RDIF) ಮತ್ತು ಗಮಲೇ ಇನ್​ಸ್ಟಿಟ್ಯೂಟ್ ಅಭಿವೃದ್ಧಿಪಡಿಸಿರುವ ‘ಸ್ಪುಟ್ನಿಕ್​ V’ ಲಸಿಕೆಗೆ ಡಿಸೆಂಬರ್ 21ರಂದು ಅನುಮೋದನೆ ಕೊಟ್ಟಿತ್ತು. ಇದೀಗ ಲಸಿಕೆ ಹಾಕುವ ಪ್ರಕ್ರಿಯೆಯನ್ನ ಕೂಡ ಆರಂಭಿಸಿದೆ. ಈ ಲಸಿಕೆಗೆ ಅರ್ಜೆಂಟೀನಾದಲ್ಲೂ ಅನುಮೋದನೆ ಸಿಕ್ಕಿದೆ. ಶೀಘ್ರದಲ್ಲೇ ಅಲ್ಲೂ ಲಸಿಕೆ ಹಾಕಲು ಆರಂಭಿಸಲಾಗುತ್ತೆ. ‘ಸ್ಪುಟ್ನಿಕ್‌ V’ ಲಸಿಕೆ ಶೇ. 95ರಷ್ಟು ಪರಿಣಾಮಕಾರಿ ಅಂತ ಕಂಪನಿ ಘೋಷಿಸಿಕೊಂಡಿದೆ.

-masthmagaa.com

Contact Us for Advertisement

Leave a Reply