ಟ್ರಂಪ್ ಕೆಳಗಿಳಿಯೋ ಮುನ್ನ ಪಕ್ಕದ ಪಾಕಿಸ್ತಾನಕ್ಕೆ ಗುನ್ನ..!

masthmagaa.com:

ಅಮೆರಿಕ: ಟ್ರಂಪ್ ಅಧ್ಯಕ್ಷ ಗಾದಿಯಿಂದ ಕೆಳಗಿಳಿಯೋ ಮುನ್ನ ಅಮೆರಿಕ ಪಾಕಿಸ್ತಾನಕ್ಕೆ ದೊಡ್ಡ ಗುನ್ನ ಇಡೋ ಸಾಧ್ಯತೆ ದಟ್ಟವಾಗಿದೆ. ಯಾಕಂದ್ರೆ ಅಮೆರಿಕದ 117ನೇ ಕಾಂಗ್ರೆಸ್​​​​​ನ ಮೊದಲನೇ ದಿನವೇ ಪಾಕಿಸ್ತಾನವನ್ನು ಮೇಜರ್ ನಾನ್ ನ್ಯಾಟೋ ಒಕ್ಕೂಟದಿಂದ ಹೊರಹಾಕುವ ಮಸೂದೆ ಮಂಡಿಸಿದೆ.

ರಿಪಬ್ಲಿಕಬ್ ಪಕ್ಷದ ಆ್ಯಂಡಿ ಬಿಗ್ಸ್​​ ಈ ಬಿಲ್ ಮಂಡಿಸಿದ್ದಾರೆ. ಪಾಕಿಸ್ತಾನ ತನ್ನ ದೇಶದಲ್ಲಿ ಹಕ್ಕಾನಿ ನೆಟ್ವರ್ಕ್​ ಅಂದ್ರೆ ಉಗ್ರರ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿರೋದನ್ನು ಮತ್ತು ಉಗ್ರರನ್ನು ಬಂಧಿಸಿ ಶಿಕ್ಷಿಸುತ್ತಿರುವ ಬಗ್ಗೆ ಅಧ್ಯಕ್ಷರ ಕಚೇರಿಯಿಂದ ಪ್ರಮಾಣೀಕರಿಸುವವರೆಗೆ ಪಾಕಿಸ್ತಾನಕ್ಕೆ ಪ್ರಮುಖ ನ್ಯಾಟೋ ಒಕ್ಕೂಟದ ಸದಸ್ಯತ್ವ ನೀಡಲು ಸಾಧ್ಯವಿಲ್ಲ ಅಂತ ಕೂಡ ಬಿಲ್​​ನಲ್ಲಿ ಹೇಳಲಾಗಿದೆ.

ಅಂದ್ರೆ ವಿಚಾರ ಸಿಂಪಲ್​​.. 2018ರಲ್ಲಿ ಡೊನಾಲ್ಡ್​ ಟ್ರಂಪ್, ಪಾಕಿಸ್ತಾನಕ್ಕೆ ಅಮೆರಿಕದಿಂದ ಸಿಗುತ್ತಿದ್ದ ಹಣಕಾಸು ಮತ್ತು ರಕ್ಷಣಾ ನೆರವಿನ ಮೇಲೆ ನಿರ್ಬಂಧ ವಿಧಿಸಿದ್ರು. ಈಗ ಅಧ್ಯಕ್ಷಾವಧಿ ಮುಗಿಯುತ್ತಿರುವ ಹೊತ್ತಲ್ಲಿ ಮೇಜರ್ ನಾನ್ ನ್ಯಾಟೋ ಒಕ್ಕೂಟದಿಂದ ಹೊರಹಾಕುವ ಪ್ರಯತ್ನಕ್ಕೆ ಕೈ ಹಾಕಿದೆ.

ಸಾಮಾನ್ಯವಾಗಿ ಈ ಸ್ಥಾನವನ್ನು ನ್ಯಾಟೋದಲ್ಲಿ ಸದಸ್ಯತ್ವ ಹೊಂದಿಲ್ಲದ ರಾಷ್ಟ್ರಗಳಿಗೆ ಅಮೆರಿಕ ಕಡೆಯಿಂದ ನೀಡಲಾಗುತ್ತೆ. ಈ ಸ್ಥಾನಮಾನದಿಂದ ರಕ್ಷಣಾ ಸಾಮಗ್ರಿ ಪೂರೈಕೆ ಜೊತೆಗೆ ರಕ್ಷಣಾ ಕ್ಷೇತ್ರದಲ್ಲಿ ಸಂಶೋಧನೆ, ಅಭಿವೃದ್ಧಿಗೆ ಅಮೆರಿಕದ ಸಹಯೋಗ ಸಿಗುತ್ತೆ.. ಪಾಕಿಸ್ತಾನಕ್ಕೆ 2004ರಲ್ಲಿ ಈ ಸ್ಥಾನಮಾನ ನೀಡಲಾಗಿತ್ತು. ಆದ್ರೆ ಈಗ ಆ ಸ್ಥಾನದಿಂದ ಕಿತ್ತುಹಾಕಲು ಅಮೆರಿಕ ಕಾಂಗ್ರೆಸ್​​ನಲ್ಲಿ ಬಿಲ್ ಮಂಡನೆಯಾಗಿದೆ.

-masthmagaa.com

Contact Us for Advertisement

Leave a Reply