ಭಾರತ ಹಾಗೂ ಗಲ್ಫ್‌ ರಾಷ್ಟ್ರಗಳ ಸಂಬಂಧ ಅತ್ಯುತ್ತಮವಾಗಿಯೇ ಮುಂದುವರೆಯಲಿದೆ: ಕೇಂದ್ರ ಸರ್ಕಾರ

masthmagaa.com:

ಪ್ರವಾದಿ ಮಹ್ಮದರ ವಿರುದ್ದ ಆಕ್ಷೇಪಾರ್ಹ ಹೇಳಿಕೆ ವಿಚಾರವಾಗಿ ಸಾಕಷ್ಟು ವಿವಾದಕ್ಕೆ ಒಳಗಾಗಿರೋ ಬಿಜೆಪಿಯ ಉಚ್ಚಾಟಿತ ವಕ್ತಾರೆ ನುಪೂರ್ ಶರ್ಮಾಗೆ ಮುಂಬೈ ಪೊಲೀಸ್‌ ಸಮನ್ಸ್‌ ಜಾರಿ ಮಾಡಿದೆ. ಈ ಮೇಲ್‌ ಮತ್ತು ಪೋಸ್ಟ್‌ ಮೂಲಕ ನೊಟೀಸ್‌ ಕಳುಹಿಸಲಾಗಿದ್ದು ಜೂನ್‌ 22 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರೋ ಮುಂಬೈನ ಪೊಲೀಸ್‌ ಕಮಿಷನರ್‌ ಸಂಜಯ್‌ ಪಾಂಡೆ ನುಪೂರ್‌ ವಿರುದ್ದ ಮುಂಬೈನ ಪಿಧೊನಿ ಠಾಣೆಯಲ್ಲಿ FIR ದಾಖಲಿಸಲಾಗಿದೆ. ಅವರ ಹೇಳಿಕೆಗಳನ್ನ ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಅಂತ ಹೇಳಿಕೆ ನೀಡಿದ್ದಾರೆ. ಇತ್ತ ನುಪೂರ್‌ ಅವರಿಗೆ ಜೀವ ಬೆದರಿಕೆ ಕೇಳಿ ಬರ್ತಿದೆ ಅಂತ ದೆಹಲಿ ಪೊಲೀಸರು ಅವ್ರಿಗೆ ಹೆಚ್ಚಿನ ಭದ್ರತೆ ಒದಗಿಸಿದ್ದಾರೆ. ಇನ್ನು ಪ್ರಕರಣ ವಿಶ್ವಸಂಸ್ಥೆವರೆಗೂ ತಲುಪಿದೆ. ವಿಶ್ವಸಂಸ್ಥೆಯ ಚೀಫ್‌ ಸೆಕ್ರಟ್ರಿ ಆಂಟನಿಯೋ ಗುಟ್ರೆಸ್‌ ಈ ಬಗ್ಗೆ ಮಾತಾಡಿ, ಎಲ್ಲರೂ ಎಲ್ಲಾ ಧರ್ಮಗಳಿಗೂ ಗೌರವ ಕೊಡೋದನ್ನ ನಾವು ಬಲವಾಗಿ ಪ್ರತಿಪಾದಿಸ್ತೀವಿ ಅಂತ ಹೇಳಿದ್ದಾರೆ. ಇತ್ತ ನುಪೂರ್‌ರ ಹೇಳಿಕೆಯಿಂದ ಭಾರತ ಹಾಗೂ ಮುಸ್ಲಿಂ ರಾಷ್ಟ್ರಗಳ, ಮುಖ್ಯವಾಗಿ ಗಲ್ಫ್‌ ರಾಷ್ಟ್ರಗಳ ಜೊತೆಗಿನ ಸಂಬಂಧಕ್ಕೆ ಹಿನ್ನೆಡೆಯಾಗ್ಬೋದು ಅನ್ನೋ ವಿಚಾರಗಳು ಕೂಡ ಕೇಳಿಬರ್ತಿದೆ. ಇದಕ್ಕೆ ಈಗ ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ಪ್ರತಿಕ್ರಿಯಿಸಿದ್ದಾರೆ. ʻಹೇಳಿಕೆ ವಿಚಾರವಾಗಿ ನಮ್ಮ ರಾಯಭಾರಿಗಳು ಸ್ಪಷ್ಟನೆ ನೀಡಿದ್ದಾರೆ. ಸರ್ಕಾರದ ಮೇಲೆ ಅವರ ಹೇಳಿಕೆಗಳು ಯಾವುದೇ ಪರಿಣಾಮವನ್ನ ಬೀರುವುದಿಲ್ಲ. ನಮ್ಮ ಹಾಗೂ ಗಲ್ಫ್‌ ರಾಷ್ಟ್ರಗಳ ಅತ್ಯುತ್ತಮ ಸಂಬಂಧ ಹಾಗೆಯೇ ಮುಂದುವರೆಯಲಿದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply