masthmagaa.com:

ಬ್ರೇಕ್​ ಡಾನ್ಸ್ ಮಾಡೋರಿಗೊಂದು ಗುಡ್​ ನ್ಯೂಸ್​. ನಿಮ್ಮ ನೆಚ್ಚಿನ ಬ್ರೇಕ್​ ಡಾನ್ಸ್​ ಈಗ ಒಲಿಂಪಿಕ್ಸ್​ಗೆ ಸೇರ್ಪಡೆಗೊಂಡಿದೆ. 2024ರಲ್ಲಿ ಫ್ರಾನ್ಸ್​ನ ಪ್ಯಾರಿಸ್​​ನಲ್ಲಿ ನಡೆಯಲಿರುವ ಒಲಿಂಪಿಕ್ಸ್​ನಲ್ಲಿ ಈ ಆಟ ಪದಾರ್ಪಣೆ ಮಾಡಲಿದೆ ಅಂತ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC) ಘೋಷಿಸಿದೆ. ಒಲಿಂಪಿಕ್ಸ್​ನಲ್ಲಿ ಸ್ಥಾನ ಪಡೆದ ಮೊದಲ ಡಾನ್ಸ್​ ಕ್ರೀಡೆ ಇದಾಗಿದೆ.

4 ವರ್ಷಗಳಿಗೊಮ್ಮೆ ನಡೆಯುವ ಒಲಿಂಪಿಕ್ಸ್​ ಕಡೆ ಯುವ ಜನತೆಯನ್ನ ಆಕರ್ಷಿಸಲು IOC ನಾನಾ ಪ್ರಯತ್ನ ನಡೆಸುತ್ತಿದೆ. ಅದರ ಒಂದು ಭಾಗವಾಗಿ ಯುವ ಜನತೆಯ ಫೇವರಿಟ್ ಬ್ರೇಕ್ ಡಾನ್ಸನ್ನು ಒಲಿಂಪಿಕ್ಸ್​ಗೆ ಸೇರಿಸಲಾಗಿದೆ. ಇದರ ಜೊತೆಗೆ ಕೊರೋನಾ ಹಾವಳಿಯಿಂದ 2021ಕ್ಕೆ ಮುಂದೂಡಿಕೆಯಾಗಿರುವ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಸ್ಕೇಟ್​ಬೋರ್ಡಿಂಗ್, ಸ್ಪೋರ್ಟ್​ ಕ್ಲೈಂಬಿಂಗ್ ಮತ್ತು ಸರ್ಫಿಂಗ್​ ಆಟಗಳು ಪದಾರ್ಪಣೆ ಮಾಡಲಿವೆ.

-masthmagaa.com

Contact Us for Advertisement

Leave a Reply