masthmagaa.com:

ಕೊರೋನಾ ವೈರಸ್​​ಗೆ ಆಕ್ಸ್​ಫರ್ಡ್​ ಯುನಿವರ್ಸಿಟಿ ಮತ್ತು ಆಸ್ಟ್ರಾಝೆನೆಕಾ ಕಂಪನಿ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಲಸಿಕೆಗೆ ಬ್ರಿಟನ್​ ಸರ್ಕಾರ ಅನುಮೋದನೆ ನೀಡಿದೆ. ಈ ಮೂಲಕ ಆಕ್ಸ್​ಫರ್ಡ್ ಲಸಿಕೆಗೆ ಅನುಮೋದನೆ ನೀಡಿದ ಮೊದಲ ದೇಶ ಎನಿಸಿಕೊಂಡಿದೆ. ಬ್ರಿಟನ್​ನಲ್ಲಿ ಹೊಸ ಪ್ರಭೇದದ ಕೊರೋನಾ ವೈರಾಣು ಹಾವಳಿ ಇಡ್ತಿರುವಾಗಲೇ ಈ ಲಸಿಕೆಗೆ ಅನುಮೋದನೆ ಕೊಟ್ಟಿರೋದು ಗಮನಾರ್ಹ. ಬ್ರಿಟನ್​ನಲ್ಲಿ ಅನುಮೋದನೆ ಪಡೆದ 2ನೇ ಕೊರೋನಾ ಲಸಿಕೆ ಇದಾಗಿದೆ. ಈಗಾಗಲೇ ಫೈಝರ್ ಲಸಿಕೆಯನ್ನ ಅಲ್ಲಿನ ಜನರಿಗೆ ಹಾಕಲಾಗ್ತಿದೆ.

ಅಂದ್ಹಾಗೆ ಆಕ್ಸ್​ಫರ್ಡ್​ ಲಸಿಕೆಯ ಅರ್ಧ ಡೋಸ್‌ 90% ಪರಿಣಾಮಕಾರಿಯಾದ್ರೆ, ಪೂರ್ತಿ ಡೋಸ್‌ 62% ಪರಿಣಾಮಕಾರಿ ಅಂತ ಇತ್ತೀಚೆಗೆ ಕಂಪನಿ ಘೋಷಿಸಿಕೊಂಡಿತ್ತು. ಎರಡನ್ನೂ ಸೇರಿಸಿ ತಮ್ಮ ಲಸಿಕೆ 70.4% ಪರಿಣಾಮಕಾರಿ ಅಂತ ಹೇಳಿಕೊಂಡಿತ್ತು. ಭಾರತದಲ್ಲೂ ಆಕ್ಸ್​ಫರ್ಡ್​ ಲಸಿಕೆಯ ತುರ್ತು ಬಳಕೆಗೆ ಸೀರಂ ಇನ್​​ಸ್ಟಿಟ್ಯೂಟ್ ಆಫ್ ಇಂಡಿಯಾ ಅರ್ಜಿ ಸಲ್ಲಿಸಿದೆ. ಆದ್ರೆ ಇದುವರೆಗೆ ಅನುಮತಿ ಸಿಕ್ಕಿಲ್ಲ. ಭಾರತದಲ್ಲಿ ಆಕ್ಸ್​ಫರ್ಡ್​ ಲಸಿಕೆಗೆ ‘ಕೋವಿಶೀಲ್ಡ್​’ ಅಂತ ಹೆಸರಿಡಲಾಗಿದೆ. ಇದರ ಮಾನವ ಪ್ರಯೋಗ ಮತ್ತು ಪೂರೈಕೆಯನ್ನ ಸೀರಂ ಇನ್​ಸ್ಟಿಟ್ಯೂಟೇ ನೋಡಿಕೊಳ್ತಿದೆ.

-masthmagaa.com

Contact Us for Advertisement

Leave a Reply