ಪಾಕ್​​ಗೆ ಬಂದ ಬ್ರಿಟನ್​​ ರಾಜಕುಮಾರ..! ರೆಡ್ ಕಾರ್ಪೆಟ್ ಹಾಸಿ ಸ್ವಾಗತ..!

ಪಾಕಿಸ್ತಾನಕ್ಕೆ ಭೇಟಿ ನೀಡಿರುವ ಬ್ರಿಟನ್ ರಾಜಕುಮಾರ ವಿಲಿಯಮ್ ಮತ್ತು ಅವರ ಪತ್ನಿ ಕೇಟ್ ಮಿಡಲ್ಟನ್ ಅವರಿಗೆ ಭವ್ಯ ಸ್ವಾಗತ ಕೋರಲಾಗಿದೆ. ಐದು ದಿನಗಳ ಪ್ರವಾಸ ಇದಾಗಿದ್ದು, ನೂರ್ ಖಾನ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರಿಗೆ ಪಾಕ್ ವಿದೇಶಾಂಗ ಸಚಿವ ಮೊಹ್ಮದ್ ಖುರೇಷಿ ಗುಲಾಬಿ ಹೂವು ನೀಡಿ ಸ್ವಾಗತಿಸಿದ್ರು. ಬ್ರಿಟನ್​​ನ ಫಾರಿನ್ ಮತ್ತು ಕಾಮನ್​ವೆಲ್ತ್​ ಆಫೀಸ್  ಮನವಿ ಮೇರೆಗೆ ಈ ಪ್ರವಾಸ ಕೈಗೊಳ್ಳಲಾಗಿದೆ.

ಬ್ರಿಟನ್ ರಾಜಕುಮಾರ  ಮತ್ತವರ ಪತ್ನಿಗೆ ಪಾಕಿಸ್ತಾನ ರೆಡ್ ಕಾರ್ಪೆಟ್ ಸ್ವಾಗತ ಕೋರಿದೆ. ಅಲ್ಲದೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಮೊಹ್ಮದ್ ಖುರೇಷಿ, 2006ರ ಬಳಿಕ ಇದೇ ಮೊದಲ ಬಾರಿಗೆ ರಾಜಮನೆತನದ ದಂಪತಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾರೆ. ಐದು ದಿನಗಳ ಕಾಲ ದೇಶಾದ್ಯಂತ ಸಂಚರಿಸಲಿದ್ದಾರೆ. ಇದರಿಂದ ಎರಡೂ ದೇಶಗಳ ನಡುವೆ ಸಂಪರ್ಕ ಮತ್ತು ಸದ್ಭಾವನೆ ಬೆಳೆಯುತ್ತೆ ಎಂದು ಹೇಳಿದ್ದಾರೆ.

Contact Us for Advertisement

Leave a Reply