ಭಾರತ ಪಾಕ್ ಗಡಿಯಲ್ಲಿ ಭಾರಿ ಪ್ರಮಾಣದ ಹೆರಾಯಿನ್!

masthmagaa.com:

ಭಾರತ ಪಾಕಿಸ್ತಾನ ಗಡಿಯಲ್ಲಿ 56 ಕೆಜಿಯಷ್ಟು ಮಾದಕ ವಸ್ತು ವಶಕ್ಕೆ ಪಡೆಯಲಾಗಿದೆ. ಒಂದೇ ಸಲ ಈ ಪ್ರಮಾಣದಲ್ಲಿ ಮಾದಕ ವಸ್ತು ವಶಕ್ಕೆ ಪಡೆದಿರೋದು ಇದೇ ಮೊದಲು. ನಿನ್ನೆ ರಾತ್ರಿ ರಾಜಸ್ತಾನದ ಬಿಕಾನೇರ್​​ನ ಬಂಡ್ಲಿ ಪೋಸ್ಟ್​​​​​​​​​​ನಲ್ಲಿ ಬಿಎಸ್​ಎಫ್ ಯೋಧರಿಗೆ ಅನುಮಾನಾಸ್ಪದ ಚಲನೆ ಕಂಡು ಬಂದಿದೆ. ಆಗ ಬಿಎಸ್​ಎಫ್ ಯೋಧರು ಗುಂಡು ಹಾರಿಸಿದ್ದು, ಕಳ್ಳಸಾಗಾಣಿಕೆ ಮಾಡ್ತಿದ್ದ ದುಷ್ಟರು ಓಡಿಹೋಗಿದ್ದಾರೆ. ನಂತರ ಜಾಗಕ್ಕೆ ಹೋಗಿ ನೋಡಿದಾಗ ಮಾದಕ ವಸ್ತು ತುಂಬಿದ 54 ಪ್ಯಾಕೇಟ್​​ಗಳು ಪತ್ತೆಯಾಗಿದ್ದು, ಒಟ್ಟು 56.63 ಕೆಜಿಯಷ್ಟಿತ್ತು ಅಂತ ಗೊತ್ತಾಗಿದೆ. ಇದನ್ನು ಪಾಕಿಸ್ತಾನ ಕಡೆಯಿಂದ ಭಾರತಕ್ಕೆ ಸಾಗಿಸಲಾಗ್ತಿತ್ತು ಅಂತ ಅಧಿಕಾರಿಗಳು ತಿಳಿಸಿದ್ಧಾರೆ.

-masthmagaa.com

Contact Us for Advertisement

Leave a Reply