CBSE 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ..!

masthmagaa.com:

ಕೊರೋನಾ ಹಾವಳಿಯಿಂದ ಮುಂದೂಡಿಕೆಯಾಗಿದ್ದ ಸಿಬಿಎಸ್​ಇ 10 ಮತ್ತು 12ನೇ ತರಗತಿ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟವಾಗಿದೆ. ಜುಲೈ 1ರಿಂದ 15ರ ವರೆಗೆ ಪರೀಕ್ಷೆಗಳು ನಡೆಯಲಿವೆ. 10ನೇ ತರಗತಿ ಪರೀಕ್ಷೆ ಕೇವಲ ಈಶಾನ್ಯ ದೆಹಲಿಯಲ್ಲಿ ಬಾಕಿ ಇದೆ. ಆದ್ರೆ 12ನೇ ತರಗತಿ ಪರೀಕ್ಷೆಗಳು ದೇಶಾದ್ಯಂತ ನಡೆಯಲಿದೆ. ಆದ್ರೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಕೆಲವೊಂದು ನಿಯಮಗಳನ್ನ ಪಾಲಿಸಲು ಸೂಚಿಸಲಾಗಿದೆ.

– ವಿದ್ಯಾರ್ಥಿಗಳು ಟ್ರಾನ್ಸ್​ಪರೆಂಟ್ ಬಾಟಲ್​ನಲ್ಲಿ ತಾವೇ ಸ್ಯಾನಿಟೈಸರ್ ತರಬೇಕು.

– ಮುಖಕ್ಕೆ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಬೇಕು.

– ಕೊರೋನಾ ಸೋಂಕು ಹರಡದಂತೆ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಪೋಷಕರು ತಮ್ಮ ಮಕ್ಕಳಿಗೆ ತಿಳಿಸಿಕೊಡಬೇಕು.

– ತಮ್ಮ ಮಕ್ಕಳು ಆರೋಗ್ಯವಾಗಿದ್ದಾರೆ ಅಂತ ಪೋಷಕರು ಖಚಿತಪಡಿಸಿಕೊಳ್ಳಬೇಕು.

-masthmagaa.com

Contact Us for Advertisement

Leave a Reply